








ಅಮರಪಡ್ನೂರು ಗ್ರಾಮದ ಪುಳಿಮರಡ್ಕ ಶ್ರೀಮತಿ ಉಷಾ ಮತ್ತು ಶ್ರೀ ಶೇಷಪ್ಪ ಗೌಡರ ಪುತ್ರ ಹರ್ಷಿತ್ ಮತ್ತು ಅಮರ ಮುಡ್ನೂರು ಗ್ರಾಮದ ಕಡಪಳ ಶ್ರೀಮತಿ ಕಮಲಾಕ್ಷಿ ಮತ್ತು ಕೆ.ಬಾಲಕೃಷ್ಣರವರ ಪುತ್ರಿ ತೇಜಶ್ರೀಯವರ ವಿವಾಹವು ಮೇ. ೧೧ರಂದು ಕುಕ್ಕುಜಡ್ಕದ ಅಮರ ಸಹಕಾರ ಸಭಾಭವನದಲ್ಲಿ ನಡೆಸಲು ನಿಶ್ಚಯಿಸಿದ್ದು, ಅನಿವಾರ್ಯ ಕಾರಣಗಳಿಂದಾಗಿ ಮದುವೆ ಸಮಾರಂಭವನ್ನು ಮುಂದೂಡಲಾಗಿದೆ. ಆಮಂತ್ರಿತ ಬಂಧು ಮಿತ್ರರು ಸಹಕರಿಸಬೇಕೆಂದು ಮನೆಯವರು ತಿಳಿಸಿದ್ದಾರೆ.








