ಬೇಂಗಮಲೆಯಿಂದ ಚೊಕ್ಕಾಡಿ ಕಡೆಗೆ ಹೋಗುವ ರಸ್ತೆಯಲ್ಲಿ ಕಣಪ್ಪಿಲ ಎಂಬಲ್ಲಿ ಕಾರೊಂದು ಸ್ಕೂಟಿಯೊಂದಕ್ಕೆ ಢಿಕ್ಕಿ ಹೊಡೆದು ಪರಾರಿಯಾಗಿರುವ ಘಟನೆ ಇಂದು ರಾತ್ರಿ 8 ಗಂಟೆಯ ಸುಮಾರಿಗೆ ನಡೆದಿರುವುದಾಗಿ ವರದಿಯಾಗಿದೆ.








ಅಪಘಾತದ ಪರಿಣಾಮವಾಗಿ ರಸ್ತೆಯಲ್ಲಿ ಬಿದ್ದಿದ್ದ ಸ್ಕೂಟಿ ಸವಾರನನ್ನು ಕಂಡ ಸ್ಥಳೀಯರು ಗಾಯಗೊಂಡಿದ್ದ ಅವರನ್ನು ಸುಳ್ಯದ ಅಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಗಾಯಾಳು ಅಮರಮುಡ್ನೂರು ಗ್ರಾಮದ ದೊಡ್ಡಿಹಿತ್ಲುನವರೆಂದು ತಿಳಿದುಬಂದಿದ್ದು, ಸುಳ್ಯದಲ್ಲಿ ಸಿ.ಸಿ. ಕ್ಯಾಮರಾದ ಕೆಲಸ ಮಾಡುವವರೆನ್ನಲಾಗಿದೆ. ಹೆಚ್ಚಿನ ವಿವರ ತಿಳಿದುಬರಬೇಕಿದೆ.









