ಎಸ್‌.ಎಸ್‌.ಎಲ್‌.ಸಿ. ಫಲಿತಾಂಶ

0

ಸಾಂದೀಪ್ ವಿಶೇಷ ಮಕ್ಕಳ ಶಾಲೆಗೆ ಶೇ.80 ಫಲಿತಾಂಶ

ಐದು ಮಕ್ಕಳಲ್ಲಿ ನಾಲ್ಕು ಮಕ್ಕಳು ಉತ್ತೀರ್ಣ

ಎಸ್.ಎಸ್‌.ಎಲ್‌.ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಸಾಂದೀಪ್ ವಿಶೇಷ ಮಕ್ಕಳ ಶಾಲೆಗೆ ಶೇ.80 ಫಲಿತಾಂಶ ದಾಖಲಿಸಿದೆ.

ಪರೀಕ್ಷೆಗೆ ಹಾಜರಾದ 5 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 4 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ವೇಣು ಪ್ರಸಾದ್,ಕ್ಲೇವಿಟ,ಅಗಸ್ಟಿನ್,ಯಶ್ವಿನ್ ತೇರ್ಗಡೆ ಹೊಂದಿದ್ದಾರೆ.

ಸುಳ್ಯದ ವಿಕಲ ಚೇತನರ ಸಾಂದೀಪ್ ಶಾಲೆ ಯ ಐವರು ಎಸ್ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾಗಿದ್ದು ಆ ಪೈಕಿ 4ವಿದ್ಯಾರ್ಥಿಗಳು ತೇರ್ಗಡೆಯಾಗಿ ಹೊಸ ಬದುಕಿಗೆ ಸಜ್ಜಾದ ಸಂತೋಷ ಅವರ ಹೆತ್ತವರಿಗೂ ಎಂ. ಬಿ.ಫೌಂಡೇಶನ್ ಸಂಸ್ಥೆಗೂ ಹೆಮ್ಮೆ ತಂದಿದೆ.
ಈ ಮಕ್ಕಳಿಗೆ ಶಾಲೆಯಲ್ಲಿ ತರಬೇತಿ ನೀಡಿ ಸುಳ್ಯ ಸರಕಾರಿ ಜೂನಿಯರ್ ಕಾಲೇಜ್ ನಲ್ಲಿ ಪರೀಕ್ಷೆಗೆ. ಹಾಜರಾಗಲು ಅವಕಾಶ ಕೊಡಲಾಗಿತ್ತು. ಜೂನಿಯರ್ ಕಾಲೇಜ್ ಉಪ ಪ್ರಾಂಶುಪಾಲರಾದ ಮೂಡಿತ್ತಾಯರವರು ವಿಶೇಷ ಪ್ರೋತ್ಸಾಹ ಮಕ್ಕಳಲ್ಲಿ ಆತ್ಮ ವಿಶ್ವಾಸ ಹೆಚ್ಚಿಸಲು ಕಾರಣವಾಗಿತ್ತು ಎಂದು ಶಾಲೆ ಅಧ್ಯಕ್ಷ ಎಂ. ಬಿ ಸದಾಶಿವ ತಿಳಿಸಿದರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಕರಿಸಿದ ಶಿಕ್ಷಕರಿಗೂ ಸಹಕರಿಸಿದವರಿಗೂ ಕೃತಜ್ಞತೆ ಸಲ್ಲಿಸಿದರು.