ಶಾಂತಿನಗರ -ಬೆಟ್ಟಂಪ್ಪಾಡಿ ರಸ್ತೆಯನ್ನು ಮಳೆಗಾಲ ಬರುವ ಮುನ್ನ ಸರಿಪಡಿಸಿಕೊಡುವಂತೆ ನ. ಪಂ.ಮುಖ್ಯಾಧಿಕಾರಿಗೆ ಸ್ಥಳೀಯರ ಮನವಿ

0

ಸುಳ್ಯ ನಗರ ಪಂಚಾಯತಿಗೆ ಒಳಪಟ್ಟ ಶಾಂತಿನಗರ -ಬೆಟ್ಟಂಪಾಡಿ ರಸ್ತೆಯಲ್ಲಿ ಚರಂಡಿ ವ್ಯವಸ್ಥೆಗಳಿಲ್ಲದೆ ಮಳೆ ನೀರು ರಸ್ತೆಯಲ್ಲಿಯೇ ಹರಿದು ಸಂಚಾರಕ್ಕೆ ಸಮಸ್ಯೆ ಆಗುತ್ತಿದ್ದು ಕೊಡಲೇ ಸರಿಪಡಿಸಿ ಕೊಡುವಂತೆ ಶಾಂತಿನಗರ ಪರಿಸರದ ನಿವಾಸಿಗಳು ಮೇ ೫ ರಂದು ನಗರ ಪಂಚಾಯತ್ ಕಚೇರಿಯಲ್ಲಿ ಮುಖ್ಯಾಧಿಕಾರಿಯವರಿಗೆ ಮನವಿ ನೀಡಿದ್ದಾರೆ.

ಈ ಭಾಗದ ರಸ್ತೆಯು ತೀರಾ ಇಕ್ಕಟ್ಟಾಗಿದ್ದು ವಾಹನ ಸಂಚಾರಕ್ಕೆ ಅನಾನುಕೂಲಕರವಾಗಿದೆ. ಪ್ರತಿನಿತ್ಯ ಶಾಲಾ ಮಕ್ಕಳು ಸೇರಿದಂತೆ ಊರಿನವರು ಈ ರಸ್ತೆಯಲ್ಲಿ ನಡೆದಾಡುತಿದ್ದು ರಸ್ತೆಯು ತೀರಾ ಹದಗೆಟ್ಟಿರುವುದರಿಂದ ಸಂಚಾರಕ್ಕೆ ಅತ್ಯಂತ ಅಪಾಯಕಾರಿಯಾಗಿರುತ್ತದೆ.


ಆದ್ದರಿಂದ ಊರಿನವರ ಹಾಗು ಶಾಲಾ ಮಕ್ಕಳ ಭದ್ರತೆ ದೃಷ್ಠಿಯಿಂದ ಹಾಗು ಸುಗಮ ಸಂಚಾರಕ್ಕಾಗಿ ಈ ರಸ್ತೆಯನ್ನು ಆಧಷ್ಟು ಬೇಗ ದುರಸ್ತಿಮಾಡಿ, ಚರಂಡಿ ವ್ಯವಸ್ಥೆಯನ್ನು ಕಲ್ಪಿಸಿ, ಎರಡು ವಾಹನಗಳ ಸುಗಮ ಸಂಚಾರಕ್ಕೆ ತಕ್ಕಂತೆ ಅಗಲಗೊಳಿಸಿ ಉತ್ತಮ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಸ್ಥಳೀಯ ನಿವಾಸಿಗಳು ಅಧಿಕಾರಿ ಯವರಲ್ಲಿ ಮನವಿ ಮಾಡಿಕ್ಕೊಂಡರು.

ಮನವಿಗೆ ಸ್ಪಂದಿಸಿದ ಮುಖ್ಯ ಅಧಿಕಾರಿ ಸುಧಾಕರ್ ರವರು ಕೂಡಲೇ ರಸ್ತೆ ಬದಿ ಕಣಿ ರಿಪೇರಿ ಮಾಡಿಸಿ ಮಳೆ ನೀರು ರಸ್ತೆಗೆ ಬರದಂತೆ ವ್ಯವಸ್ಥೆ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನ. ಪಂ ಸದಸ್ಯ ಧೀರಾ ಕ್ರಾಸ್ತ, ನಾಮ ನಿರ್ದೇಶ ಸದಸ್ಯ ರಾಜು ಪಂಡಿತ್, ಸ್ಥಳೀಯ ನಿವಾಸಿ ನಂದರಾಜ್ ಸಂಕೇಶ್,ಅಬ್ದುಲ್ ಖಾದರ್ ಹಾಗೂ ೧೫ ಕ್ಕೂ ಹೆಚ್ಚು ಸ್ಥಳೀಯರು ಉಪಸ್ಥಿತರಿದ್ದರು.