ಪ್ರಥಮ: ಜೈ ಬಲ್ನಾಡು ಮರ್ಕಂಜ
ದ್ವಿತೀಯ : ಶಿವಾಜಿ ಬ್ರದರ್ಸ್ ಚೆಂಬು
ಮರಾಟಿ ಗೆಳೆಯರ ಬಳಗ ಮರ್ಕಂಜ ಇದರ ಆಶ್ರಯದಲ್ಲಿ ಪ್ರಥಮ ವರ್ಷದ 8 ತಂಡಗಳ ಅಂಡರ್ ಆರ್ಮ್ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ ಮರ್ಕಂಜ ಪಂಚ ಶ್ರೀ ಮೈದಾನ ತೇರ್ಲಮಜಲು ಇಲ್ಲಿ ನಡೆಯಿತು.









ಪ್ರಥಮ ಸ್ಥಾನವನ್ನು ಜೈ ಬಲ್ನಾಡ್ ಮರ್ಕಂಜ ಮತ್ತು ದ್ವಿತೀಯ ಸ್ಥಾನವನ್ನು ಶಿವಾಜಿ ಬ್ರದರ್ಸ್ ಚೆಂಬು ತಂಡ ಪಡೆದುಕೊಂಡರು.
ಪಂದ್ಯಾಟದ ಉದ್ಘಾಟನೆಯನ್ನು ಲಿಂಗಪ್ಪ ತೋಟಚಾವಡಿ, ನೆರವೇರಿಸಿದರು ಮುಖ್ಯ ಅಥಿತಿಗಳಾಗಿ ಶ್ರೀ ಬಾಲಕೃಷ್ಣ ಕಂಜಿಪಿಲಿ, ಶ್ರೀ ಭವಾನಿ ಶಂಕರ ಕುದುರೆಗುಂಡಿ, ಶ್ರೀ ನಾರಾಯಣ ಅಜ್ಜಿ ಕಲ್ಲು,ಉಪಸ್ಥಿತರಿದ್ದರು.

ಸಂಜೆ ಸಮಾರೋಪ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರೇಶ್ ಕಟ್ಟಿದ ಮೂಲೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶ್ರೀಮತಿ ಗೀತಾ ಹೊಸೊಳಿಕೆ ಅಧ್ಯಕ್ಷರು ಗ್ರಾಮ ಪಂಚಾಯತ್ ಮರ್ಕಂಜ, ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಲೀಲಾವತಿ ಸೇವಾಜೆ, ಅರಂತೋಡು ಕ್ಷೇತ್ರದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಹರೀಶ್ ಕಂಜಿಪಿಲಿ, ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ದಕ್ಷಿಣಕನ್ನಡ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ ಕೆ.ಪಲ್ಲತ್ತಡ್ಕ, ಯೋಗೀಶ್ ಬಟ್ಟಮಡ್ಕ,ಮರಾಟಿ ಸಂಘದ ನಿರ್ದೇಶಕರಾದ ನಿತ್ಯಾನಂದ ಕುಡೆಂಬಿ,ಮರ್ಕಂಜ ಎಂ.ಪಿ.ಎಲ್.ಸ್ಥಾಪಕರಾದ ದಿನೇಶ್ ಬೊಮ್ಮಾರ್,ಮರ್ಕಂಜ ಗ್ರಾಮ ಪಂಚಾಯತ್ ಸದಸ್ಯರಾದ ಗೋವಿಂದ ಅಳವುಪಾರೆ ಉಪಸ್ಥಿತರಿದ್ದರು.ಚರಣ್ ಸುಳ್ಳಿ ಕಾರ್ಯಕ್ರಮ ನಿರೂಪಣೆ ಮಾಡಿದರು*










