ಅಕ್ರಮ ಮದ್ಯ ಮಾರಾಟದ ಆರೋಪ: ಪ್ರಭಾಕರ ಕುಡೆಕಲ್ಲು ದೋಷ ಮುಕ್ತ

0

ಆಲೆಟ್ಟಿ ಗ್ರಾಮದ ಕುಡೆಕಲ್ಲು ನಿವಾಸಿ ಪ್ರಭಾಕರ ಎಂಬವರು ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಆರೋಪದಡಿಯಲ್ಲಿ ದಿನಾಂಕ 14.03.2023 ರಂದು ಕರ್ನಾಟಕ ಅಬಕಾರಿ ಕಾಯ್ದೆ ಕಲಂ 32 ಮತ್ತು 34 ರಡಿಯಲ್ಲಿ ಕೇಸು ದಾಖಲಿಸಿ ಹಿರಿಯ ನ್ಯಾಯಾಲಯದ ಕ್ರಿಮಿನಲ್ ವ್ಯಾಜ್ಯ ನಂಬ್ರ 297/2024 ರಲ್ಲಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಲಾಗಿತ್ತು.
ಸುಳ್ಯನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು ಸಾಕ್ಷಿ ವಿಫಲವಾಗಿದ್ದು ಆರೋಪಿಯನ್ನು ಹಿರಿಯ ನ್ಯಾಯಾಲಯದ ನ್ಯಾಯಾಧೀಶರಾದ ಮೋಹನ್ ಬಾಬು ರವರು ಆರೋಪಿಯನ್ನು ದೋಷ ಮುಕ್ತಗೊಳಿಸಿ ಬಿಡುಗಡೆಗೊಳಿಸಿರುತ್ತಾರೆ. ಆರೋಪಿಯ ಪರವಾಗಿ ಸುಳ್ಯದ ನ್ಯಾಯವಾದಿ ಚರಣ್ ರಾಜ್ ಕಾಯರ ಮತ್ತು ಪ್ರದೀಪ್ ಕುಮಾರ್ ಕೆ.ಎಲ್ ರವರು ವಾದಿಸಿದರು.