ಪೇರಡ್ಕದಲ್ಲಿ ನಡೆದ ಘಟನೆ
ವಿಷ ಸೇವನೆಯಿಂದ ಮನೆಯ ಸಾಕು ನಾಯಿ ಹಾಗೂ ಕೋಳಿಗಳು ಸತ್ತ ಘಟನೆ ಪೇರಡ್ಕದಿಂದ ನಿನ್ನೆ ರಾತ್ರಿ ವರದಿಯಾಗಿದೆ.
ಪೇರಡ್ಕದ ವೀರಪ್ಪ ಎಂಬುವವರ ಮನೆಯಲ್ಲಿ ಮೇ. ೪ರಂದು ರಾತ್ರಿ ಕೋಳಿಗಳು ಹಾಗೂ ನಾಯಿ ಸತ್ತಿದ್ದು, ಯಾರೋ ಕಿಡಿಗೇಡಿಗಳು ವಿಷ ಹಾಕಿರಬಹುದೆಂದು ಶಂಕಿಸಲಾಗಿದೆ.









ವೀರಪ್ಪರವರಿಗೆ ಕಲ್ಲುಗುಂಡಿ ಪೇಟೆಯಲ್ಲಿ ಅಂಗಡಿ ಇದ್ದು ರಾತ್ರಿ ವೇಳೆ ಮಳೆ ಬಂದ ಕಾರಣ ಮನೆಗೆ ಬರಲು ತಡವಾಗಿತ್ತು. ಮನೆಯಲ್ಲಿ ಮಹಿಳೆಯೊಬ್ಬರೇ ಇದ್ದರು ಎಂದು ತಿಳಿದು ಬಣದಿದೆ.
ರಾತ್ರಿ ಸುಮಾರು ೧೦.೩೦ ಕ್ಕೆ ಮನೆಯ ಅಂಗಳದಲ್ಲಿ ನಾಯಿ ಬೊಗಳುವ ಶಬ್ದಕೇಳಿ ಮಹಿಳೆ ಹೊರ ಬಂದು ನೋಡಿದಾಗ ಯಾರೋ ಅಲ್ಲಿಂದ ಓಡಿರುವ ಬಗ್ಗೆ ಅವರು ಆರೋಪ ವ್ಯಕ್ತ ಪಡಿಸಿದ್ದಾರೆ.
ಮುಂಜಾನೆ ಎದ್ದು ನೋಡಿದಾಗ ಮನೆಯ ಅಂಗಳದಲ್ಲಿ ೩ ಕೋಳಿ ಹಾಗೂ ಮನೆಯ ಸಾಕು ನಾಯಿ ಸತ್ತುಬಿದ್ದಿದ್ದು ಕಂಡುಬಂದಿದೆ.
ಈ ಬಗ್ಗೆ ಮನೆಯವರು ಕಲ್ಲುಗುಂಡಿ ಹೊರ ಠಾಣೆಯಲ್ಲಿ ದೂರು ನೀಡಿದ್ದಾರೆಂದು ತಿಳಿದು ಬಂದಿದೆ.








