ಗುತ್ತಿಗಾರು : ಚೆಸ್ ತರಬೇತಿ ಕಾರ್ಯಾಗಾರ ಉದ್ಘಾಟನೆ

0

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ರಿ ಗುತ್ತಿಗಾರು ವತಿಯಿಂದ ನಡೆಸಲಪ್ಪಡುವ ಚೆಸ್ ತರಬೇತಿ ಕಾರ್ಯಾಗಾರವನ್ನು ಪ. ವರ್ಗದ ಸಭಾ ಭವನ ಗುತ್ತಿಗಾರು ಇಲ್ಲಿ ಚಂದ್ರಕಾಂತ್ ಮೊಟ್ಟೆಮನೆ, ಮೋಹನ್ ಪೊಯ್ಯೇಮಜಲ್, ಪೂರ್ಣಚಂದ್ರ ಪೈಕ, ಅಜಯ್ ವಾಲ್ತಾಜೆ, ಅಮರ ಚಾರಿಟೇಬಲ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಯತೀಂದ್ರ ಕಟ್ಟೆಕೋಡಿ ಜೊತೆಯಾಗಿ ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ, ರಾಜೇಶ್ ಉತ್ರಂಬೆ, ಸುನಿಲ್ ಅಮೆ ಮನೆ,ಮೋಹನ್ ಮುಕ್ಕೂರ್, ಸುಕೇಶ್ ಚಾರ್ಮಾತ, ನವೀನ್ ಕಾಯರ, ಪ್ರಶಾಂತ್ ವಾಲ್ತಾಜೆ,ತೃಪ್ತಿ ಬಾಳುಗೋಡು,ಹೇಮಾಶ್ರೀ ಅಜಯ್ ವಾಲ್ತಾಜೆ, ಲಿಸ್ಸಿ ಸಂತೋಷ್ ಸೇರಿದಂತೆ ಪೋಷಕರು ಉಪಸ್ಥಿತರಿದ್ದರು.ನಿರಂತ್ ದೇವಸ್ಯ ಕಾರ್ಯಕ್ರಮ ನಿರೂಪಿಸಿದರು. ಮೇ 12ರ ವರೆಗೆ ಚೆಸ್ ತರಬೇತಿ ನಡೆಯಲಿದ್ದು ತರಬೇತಿಯನ್ನು ರಮೇಶ್ ಕರಂಗಲಡ್ಕ ನೀಡುತ್ತಿದ್ದಾರೆ. ಮುಂದೆ ಪ್ರತಿ ವಾರ ಚೆಸ್ ತರಬೇತಿ ನಡೆಯಲಿದೆ.