ಆಪರೇಷನ್ ಸಿಂಧೂರ ಕಾರ್ಯಚರಣೆ : ಸುಳ್ಯ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಸೈನಿಕರಿಗೆ ಅಭಿನಂದನೆ

0

ಸುಳ್ಯ ಯುವಕಾಂಗ್ರೆಸ್ ನೇತೃತ್ವದಲ್ಲಿ ಭಾರತೀಯ ಸೇನಾಪಡೆಗಳು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರಗಾಮಿಗಳ ನೆಲೆಗಳಿಗೆ ಕ್ಷಿಪಣಿ ದಾಳಿಗಳನ್ನು ನಡೆಸಿ ಉಗ್ರಗಾಮಿಗಳ ನೆಲೆಗಳನ್ನು ನೆಲಸಮಮಾಡಿ ಪೆಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕಾರವಾಗಿ ಆಪರೇಷನ್ ಸಿಂಧೂರ ಕಾರ್ಯಚರಣೆ ಮಾಡಿರುವ ಹಿನ್ನೆಲೆಯಲ್ಲಿ ದೇಶದ ವೀರ ಸೈನಿಕರಿಗೆ ಅಭಿನಂದನೆ ಸಲ್ಲಿಸಲಾಯಿತು.

ಯುವಕಾಂಗ್ರೇಸ್ ಅಧ್ಯಕ್ಷ ಚೇತನ್ ಕಜೆಗದ್ದೆಯವರು ಸ್ವಾಗತಿಸಿ, ಪೆಹಲ್ಗಾಮ್ ಧಾಳಿಗೆ ಪ್ರತ್ಯುತ್ತರವಾಗಿ ಭಯೋತ್ಪಾದಕರ ನೆಲೆಗಳಿಗೆ ಆಪರೇಷನ್ ಸಿಂಧೂರ ಕಾರ್ಯಚರಣೆ ಮೂಲಕ ಕ್ಷಿಪಣಿ ದಾಳಿ ನಡೆಸಿ ಭಯೋತ್ಪಾದಕರ ತಾಣಗಳನ್ನು ಪುಡಿಗೈದಿರುವುದು ಪ್ರಶಂಶನೀಯ. ರಾಷ್ಟ್ರದ ವಿಚಾರ ಬಂದಾಗ ನಾವೆಲ್ಲರೂ ಒಂದಾಗಿ ಭಾರತೀಯ ಸೇನೆಯೊಂದಿಗೆ ನಿಲ್ಲಬೇಕಾಗಿದೆ. ಸೇನೆಗೆ ನೈತಿಕ ಬೆಂಬಲ ನೀಡುವ ಹಿನ್ನೆಲೆಯಲ್ಲಿ ನಾವು ಇಂದು ಈ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಸಿ ಜಯರಾಮ್ ಮಾತನಾಡಿ ನಾವೆಲ್ಲರೂ ಭಾರತೀಯರು ರಾಷ್ಟ್ರದ ವಿಚಾರ ಬಂದಾಗ ನಾವೆಲ್ಲರೂ ಒಂದಾಗಬೇಕು. ಪೆಹಾಲ್ಗಮ್ ಧಾಳಿಯಲ್ಲಿ ಸಿಂಧೂರ ಕಳೆದುಕೊಂಡ ಭಾರತೀಯ ಮಹಿಳೆಯರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಿನ್ನೆ ರಾತ್ರಿ ಭಾರತೀಯ ಸೇನೆ ಮಹಿಳಾ ಕಮಾಂಡರ್ ನೇತೃತ್ವದಲ್ಲಿ ಯೇ ದಾಳಿ ನಡೆಸಿರುವುದು ಹೆಮ್ಮೆಯ ವಿಚಾರ ವಾಗಿದೆ ಎಂದು ಹೇಳಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಮಾತನಾಡಿ ಭಾರತೀಯ ಸೇನೆ ಆಪರೇಷನ್ ಸಿಂಧೂರ ಕಾರ್ಯಚರಣೆ ಮೂಲಕ ಭಯೋತ್ಪಾದಕರಿಗೆ ಮತ್ತು ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದೆ. ಪೆಹಾಲ್ಗಮ್ ದಾಳಿಯಲ್ಲಿ ಜೀವ ಕಳೆದುಕೊಂಡ ನಮ್ಮ ಭಾರತೀಯ ಅಮಾಯಕ ಪ್ರಜೆಗಳಿಗೆ ನ್ಯಾಯ ಒದಗಿಸಿದಂತಾಗಿದೆ. ಭಯೋತ್ಪಾದಕರ ನೆಲೆಗಳನ್ನು ಸಂಪೂರ್ಣ ಮುಗಿಸುವವರೆಗೆ ನಮ್ಮ ಸೇನೆ ದಿಟ್ಟ ಕಾರ್ಯಚರಣೆ ಮಾಡಲಿ. ನಮ್ಮ ಸೈನಿಕರಿಗೆ ಭಾರತೀಯರಾದ ನಾವೆಲ್ಲರೂ ನೈತಿಕ ಬೆಂಬಲ ನೀಡಬೇಕು ಎಂದು ಹೇಳಿದರು. ರಾಜ್ಯ ಸರಕಾರ ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ದೇವಸ್ಥಾನ, ಮಸೀದಿ ಚರ್ಚು ಗಳಲ್ಲಿ ವಿಶೇಷ ಪ್ರಾರ್ಥನೆಗೆ ಆದೇಶ ಹೊರಡಿಸಿರುವುದು ಉತ್ತಮ ಕಾರ್ಯ ವಾಗಿದೆ ಎಂದು ಹೇಳಿದರು.

ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಬಲಡ್ಕ ಮಾತನಾಡಿ ರಾಷ್ಟ್ರದ ಭದ್ರತೆ ಮತ್ತು ಏಕತೆಯ ವಿಚಾರ ಬಂದಾಗ ರಾಜಕೀಯ, ಪಕ್ಷ, ಧರ್ಮ ಎಲ್ಲವನ್ನೂ ಬದಿಗಿಟ್ಟು ದೇಶದೊಂದಿಗೆ, ಸೈನಿಕರೊಂದಿಗೆ ನಿಲ್ಲಬೇಕಿರುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಸುಳ್ಯ ಯುವ ಕಾಂಗ್ರೆಸ್ ಇಂದು ಸಮಯೋಚಿತ ವಾಗಿ ಈ ಅಭಿನಂದನೆ ಕಾರ್ಯಕ್ರಮ ಏರ್ಪಡಿಸಿ ಸೈನಿಕರಿಗೆ ನೈತಿಕ ಬೆಂಬಲ ನೀಡಿರುವುದು ಉತ್ತಮ ಕಾರ್ಯ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಸುಳ್ಯ ಬ್ಲಾಕ್ ನಿಯೋಜಿತ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಮಾತನಾಡಿ ನಮ್ಮ ದೇಶದ ಒಳಗೆ ವಿಭಿನ್ನ ಜನಾಂಗ, ವಿಭಿನ್ನ ಧರ್ಮದವರು, ಬೇರೆ ಬೇರೆ ಸಿದ್ಧಾಂತದ ಪಕ್ಷಗಳಿರಬಹುದು, ಒಳಗಿನ ಅದೆಷ್ಟೋ ಹುಳುಕುಗಳು ಇರಬಹುದು ಆದರೆ ರಾಷ್ಟ್ರ, ರಾಷ್ಟೀಯ ವಿಚಾರಗಳಿಗೆ ನಾವೆಲ್ಲರೂ ಒಂದಾಗಿ ನಿಲ್ಲುವುದು ನಮ್ಮ ದೇಶದ ಸುಭದ್ರತೆಗೆ ಅಗತ್ಯವಾಗಿದೆ. ಹಿಂದೆ ಶ್ರೀಮತಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಗಳಾಗಿದ್ದ ಸಂದರ್ಭದಲ್ಲಿ ಸಹ ಅನೇಕ ಯುದ್ಧ ನಡೆದಿದೆ. ಭಾರತ ಜಯಶಾಲಿಯಾಗಿದೆ. ಅದು ನಮ್ಮ ದೇಶದ ಒಗ್ಗಟ್ಟು ಮತ್ತು ನಮ್ಮ ಬಲಿಷ್ಠ ಸೇನಾ ಶಕ್ತಿಯಿಂದ ಆಗಿದೆ. ಆವಾಗಲೂ ದೇಶದ ಜನತೆ ನಮ್ಮ ಸೈನಿಕರ ಜೊತೆ ನೈತಿಕ ಶಕ್ತಿಯನ್ನು ತುಂಬಿ ಧೈರ್ಯ ನೀಡಿದ್ದರು. ಈಗ ಸಹ ಕೇಂದ್ರ ಸರಕಾರ ಮತ್ತು ಸೈನಿಕರೊಂದಿಗೆ ನಾವೆಲ್ಲರೂ ಸಹಕಾರ ದಿಂದ ಇರುವುದು ನಿನ್ನೆಯ ಕಾರ್ಯಚರಣೆ ಸಹ ಶ್ಲಾಘನೀಯ ವಾಗಿದೆ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ ವೆಂಕಪ್ಪ ಗೌಡ ಮಾತನಾಡಿ ಪೆಹಾಲ್ಗಮ್ ನಲ್ಲಿ ಉಗ್ರರ ದಾಳಿಯಿಂದ ಜೀವ ಕಳೆದುಕೊಂಡ 26 ಭಾರತೀಯರ ಆತ್ಮಕ್ಕೆ ಶಾಂತಿ ನೀಡುವ ಕಾರ್ಯ ಇದಾಗಿದೆ. ದೇಶಕ್ಕೆ ಮಾರಕವಾಗಿರುವ ಉಗ್ರಗಾಮಿಗಳಿಗೆ ಮತ್ತು ಉಗ್ರರನ್ನು ಪೋಷಣೆ ಮಾಡುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದಂತಾಗಿದೆ ಎಂದರು.

ಈ ಸಂದರ್ಭದಲ್ಲಿ ಸುಳ್ಯ ಕಿಸಾನ್ ಕಾಂಗ್ರೆಸ್ ಮುಖಂಡರಾದ ಸುರೇಶ್ ಎಂ ಹೆಚ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶಾಹುಲ್ ಹಮೀದ್ ಕುತ್ತಮೊಟ್ಟೆ, ನಗರ ಕಾಂಗ್ರೆಸ್ ಅಧ್ಯಕ್ಷರಾದ ಶಶಿಧರ್ ಎಂ ಜೆ, ಸುಳ್ಯ ವಿಧಾನಸಭಾ ಕ್ಷೇತ್ರದ ಇಂಟಕ್ ಕಾಂಗ್ರೆಸ್ ಅಧ್ಯಕ್ಷರಾದ ಶಾಫಿ ಕುತ್ತಮೊಟ್ಟೆ, ನಗರ ಪಂಚಾಯತ್ ಸದಸ್ಯರಾದ ಡೇವಿಡ್ ಧೀರಾ ಕ್ರಾಸ್ತಾ, ಸುಳ್ಯ ನಗರ ಪಂಚಾಯತ್ ನಾಮನಿರ್ದೇಶಿತ ಸದಸ್ಯರಾದ ರಾಜು ಪಂಡಿತ್, ಮೆಸ್ಕಾಂ ಸಲಹಾ ಸಮಿತಿ ಸದಸ್ಯರಾದ ನಂದರಾಜ್ ಸಂಕೇಶ್, ಸುಳ್ಯ ಸಿ.ಎ ಬ್ಯಾಂಕ್ ನಿರ್ದೇಶಕರಾದ ಧರ್ಮಪಾಲ ಕೊಯಿಂಗಾಜೆ, ಸುಳ್ಯ ನಗರ ಪಂಚಾಯತ್ ನಾಮನಿರ್ದೇಶಿತ ಸದಸ್ಯರಾದ ಸಿದ್ದಿಕ್ ಕೊಕ್ಕೊ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾದ ಶಿಲ್ಪಾ ಇಬ್ರಾಹಿಂ, ಸುಳ್ಯ ಬ್ಲಾಕ್ ಎಸ್ ಸಿ ಘಟಕದ ಅಧ್ಯಕ್ಷರಾದ ಮಹೇಶ್ ಬೆಳ್ಳಾರ್ಕರ್, ಸುಳ್ಯ ನಗರ ಪಂಚಾಯತ್ ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ ಪೂಜಾರಿ ಬಾಜಿನಡ್ಕ, ಭೋಜಪ್ಪ ನಾಯ್ಕ ಅಡ್ಕಾರ್, ಕೇಶವ ಮೊರಂಗಲ್ಲು, ಚೆನ್ನಕೇಶವ ಕಣಿಪಿಲ, ಪಕೀರೇಶ್ ಜಯನಗರ, ವಿಜಯ ಕುಮಾರ್ ಅಲೆಟ್ಟಿ, ಪ್ರಕಾಶ್ ಅರಂತೋಡು, ಸಲೀಂ ಪೆರುಂಗೋಡಿ, ರಹೀಂ ಬೀಜದಕೊಚ್ಚಿ, ರಾಮಕೃಷ್ಣ ಬಡ್ಡಡ್ಕ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಕಾರ್ಯದರ್ಶಿ ಭವಾನಿಶಂಕರ್ ಕಲ್ಮಡ್ಕ ಕಾರ್ಯಕ್ರಮ ನಿರೂಪಿಸಿದರು. ಬ್ಲಾಕ್ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಗೋಕುಲ್ ದಾಸ್ ವಂದಿಸಿ ರಾಷ್ಟ್ರ ಗೀತೆ ಹಾಡುವ ಮೂಲಕ ಕಾರ್ಯಕ್ರಮ ಸಂಪನ್ನಗೊಳಿಸಲಾಯಿತು.