ಪಹಲ್ಗಾಂವ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೈನ್ಯ “ಆಪರೇಷನ್ ಸಿಂಧೂರ್ “ಹೆಸರಿನಲ್ಲಿ ಪಾಕಿಸ್ತಾನದ ಒಳನುಗ್ಗಿ ಭಯೋತ್ಪಾದಕ ನೆಲೆಗಳನ್ನು ನಾಶಮಾಡಿದ ಹಿನ್ನೆಲೆಯಲ್ಲಿ ಚೆಂಬು ಗ್ರಾಮದ ಬಿಜೆಪಿ ಕಾರ್ಯಕರ್ತರು ಬಾಲಂಬಿಯಲ್ಲಿ ಮೇ.7 ರಂದು ಸಂಭ್ರಮಾಚರಣೆ ಮಾಡಿದರು.








ಭಾರತಮಾತೆಗೆ ದೀಪ ಬೆಳಗಿಸಿ ಜಯಘೋಷ ಮಾಡಿದರು.
ಬಳಿಕ ಸಭೆಯನ್ನು ಉದ್ದೇಶಿಸಿ ಬಿಜೆಪಿ ನಾಯಕರಾದ ಅನಂತ್ ಎನ್.ಸಿ ಊರುಬೈಲು ಕೇಂದ್ರ ಸರ್ಕಾರದ ನಿಲುವನ್ನು ಮತ್ತು ಭಾರತೀಯ ಸೈನ್ಯದ ಸಾಧ ನೆಯನ್ನು ಶ್ಲಾಘಿಸಿ,ಪ್ರದಾನಿ ಶ್ರೀ ಮೋದಿಯವರ ನಿರ್ಧಾರದ ಹಿಂದೆ ಗಟ್ಟಿಯಾಗಿ ನಿಲ್ಲಲು ಕರೆ ನೀಡಿದರು.
ಈ ಸಂದರ್ಭದಲ್ಲಿ ಸೊಸೈಟಿ ನಿರ್ದೇಶಕ ದಿನೇಶ್ ಸಣ್ಣಮನೆ ,ಗ್ರಾ ಪಂ ಮಾಜಿ ಸದಸ್ಯ ಶ್ರೀನಿವಾಸ್ ನಿಡಿಂಜಿ ,ಶ್ರೀ ಚೆನ್ನಕೇಶವ ಒಳಗೊಂಡಂತೆ ಬಿಜೆಪಿ ಕಾರ್ಯಕರ್ತರು,ಯುವಕೇಸರಿ ಸದಸ್ಯರು , ಸಾರ್ವಜನಿಕರು ಹಾಜರಿದ್ದರು.ಕೊನೆಯಲ್ಲಿ ಸಿಹಿಹಂಚಿ , ಪಟಾಕಿ ಸಿಡಿಸಿ ಸಂಭ್ರಮಿಸಿದರು.










