ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘದ 26 ನೇ ವಾರ್ಷಿಕ ಮಹಾಸಭೆಯು ಮೇ .25 ರಂದು ಜರುಗಲಿದ್ದು ಇದರ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಮೇ.8 ರಂದು ಕಲ್ಕುಡ ದೈವಸ್ಥಾನದಲ್ಲಿ ನಡೆಯಿತು.
ದೈವಸ್ಥಾನದ ಪೂಜಾರಿ ತಿಮ್ಮಪ್ಪ ಗೌಡ ನಾವೂರು ಪ್ರಾರ್ಥನೆ ನೆರವೇರಿಸಿ ಬಿಡುಗಡೆಗೊಳಿಸಿದರು.








ಈ ಸಂದರ್ಭದಲ್ಲಿ ಧರ್ಮದರ್ಶಿ ಮಂಡಳಿಯ ಸದಸ್ಯ ಸೋಮನಾಥ ಪೂಜಾರಿ,ಸಂಘದ ಅಧ್ಯಕ್ಷ ಮಲ್ಲೇಶ್ ಬೆಟ್ಟಂಪಾಡಿ,ಮಾಜಿ ಅಧ್ಯಕ್ಷ ಜನಾರ್ದನ ದೋಳ,ಕಾರ್ಯದರ್ಶಿ ಮಧುಚಂದ್ರಪಂಜ,ನಾಗೇಶ್ ಕೇರ್ಪಳ,ಮನೋಹರ ಬೊಳ್ಳೂರು,ಕಮಲಾಕ್ಷ ಕಲ್ಲುಗುಂಡಿ,ದೀಪಕ್ ಕಾಯರ್ತೋಡಿ, ಭಾಸ್ಕರ
ಆಚಾರ್ಯ ಸುಳ್ಯ, ಉಮೇಶ್ ಆರಾಧ್ಯ ಅರಂಬೂರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.










