







ಸಿ.ಬಿ.ಎಸ್.ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇ. 99 ಅಂಕಗಳನ್ನು ಪಡೆದ ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿನಿ ಕು. ತ್ರಾಯಿ ಭಟ್ ಇವರನ್ನು ಶಾಲಾ ಸಂಚಾಲಕರಾದ ಎಂ.ಪಿ. ಉಮೇಶ್ ಮೇ. 13ರಂದು ಸನ್ಮಾನಿಸಿ, ನಗದು ಪುರಸ್ಕಾರವನ್ನು ನೀಡಿ ಗೌರವಿಸಿದರು.
ಕು. ತ್ರಾಯಿ ಭಟ್ ಸೈನ್ಸ್, ಸೋಶಿಯಲ್ ಸ್ಟಡೀಸ್ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ವಿಷಯಗಳಲ್ಲಿ ತಲಾ100 ಅಂಕಗಳನ್ನು ಪಡೆದಿದ್ದಾರೆ. ಇವರಿಗೆ ರೂ. 25000/- ನಗದು ಪುರಸ್ಕಾರವನ್ನು ಸಂಚಾಲಕರಾದ ಎಂ.ಪಿ. ಉಮೇಶ್ ನೀಡಿ ಗೌರವಿಸಿದರು. ತ್ರಾಯಿ ಭಟ್ ಪೋಷಕರಾದ ವಿಷ್ಣುಪ್ರಶಾಂತ್ ಕಾವಿನಮೂಲೆ ಮತ್ತು ಶ್ರೀಮತಿ ಚೈತನ್ಯ ಬಿ ದಂಪತಿ, ಸಂಸ್ಥೆಯ ಪ್ರಾಂಶುಪಾಲರಾದ ದೇಚಮ್ಮ, ಹಿರಿಯ ಶಿಕ್ಷಕಿ ಸುಚಿತ್ರಾ ಕೆ, ಸಿಬ್ಬಂದಿ ಪದ್ಮಾವತಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.










