ಸುದ್ದಿ ಸುಳ್ಯ ಹಬ್ಬ ಆರಂತೋಡು ಗ್ರಾಮ ಸಮಿತಿಯ ಸಭೆ

0

ಅರಂತೋಡು ಗ್ರಾಮ ದಾಖಲೀಕರಣಕ್ಕೆ ಚಾಲನೆ

ಅಕ್ಟೋಬರ್ ತಿಂಗಳಿನಲ್ಲಿ ನಡೆಯುವ ಸುದ್ದಿ ಸುಳ್ಯ ಹಬ್ಬದ ಪೂರ್ವಭಾವಿಯಾಗಿ ನಮ್ಮೂರು ನಮ್ಮ ಹೆಮ್ಮೆ ಅಭಿಯಾನದ ಅಂಗವಾಗಿ ತಾಲೂಕಿನ ಪ್ರತಿ ಗ್ರಾಮಗಳ ದಾಖಲೀಕರಣ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಿದ್ದು,ಆರಂತೋಡು ಗ್ರಾಮ ಸಮಿತಿಯ ಸಭೆ ಮೇ 21ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಗ್ರಾಮ ಸಮಿತಿಯ ಪದಾಧಿಕಾರಿಗಳಾದ ವಿಶ್ರಾಂತ ಪ್ರಾಂಶುಪಾಲ ಕೆ.ಆರ್ ಗಂಗಾಧರ, ಆರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ಪಿಡಿಓ ಜಯಪ್ರಕಾಶ್, ಆರಂತೋಡು ತೋಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಉಪಾಧ್ಯಕ್ಷ ದಯಾನಂದ ಕುರುಂಜಿ, ಪ್ರಮುಖರಾದ ಯು.ಎಂ ಕಿಶೋರ್, ಸತೀಶ್ ನಾಯ್ಕ, ಶಿವಾನಂದ ಕುಕ್ಕುಂಬಳ, ಭವಾನಿ, ಉಷಾ, ಮಾಲಿನಿ, ಸುಜಯ, ಶ್ವೇತ, ಭಾರತಿ ಪುರುಷೋತ್ತಮ, ರವಿ ಪೂಜಾರಿ ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆ ನೀಡಿದರು.

ಸುದ್ದಿ ವರದಿಗಾರ ಕೃಷ್ಣ ಬೆಟ್ಟ ಉಪಸ್ಥಿತರಿದ್ದರು.