ಎಸ್ ಎಸ್ ಎಲ್ ಸಿ ಯಲ್ಲಿ ಕುಮಾರಸ್ವಾಮಿ ವಿದ್ಯಾಲಯದ ಅಕ್ಷರಿಗೆ ರಾಜ್ಯಕ್ಕೆ 4 ನೇ ರ್‍ಯಾಂಕ್

0

ನಿಯತಿ ಭಟ್ 6 ನೇ ರ್‍ಯಾಂಕ್, ಆಕಾಶ್ ಎ.ಎಲ್. 8 ರ್‍ಯಾಂಕ್

ಎಸ್ ಎಸ್ ಎಲ್ ಸಿ ಯಲ್ಲಿ ಅಂತಿಮ ಪರೀಕ್ಷೆಯಲ್ಲಿ ಕುಮಾರಸ್ವಾಮಿ ವಿದ್ಯಾಲಯದ ಅಕ್ಷರಿ ಗೆ 622 ಅಂಕ ಪಡೆದು ರಾಜ್ಯಕ್ಕೆ 4 ನೇ ರ್‍ಯಾಂಕ್ ಬಂದಿರುವುದಾಗಿ ವರದಿಯಾಗಿದೆ.
ನಿಯತಿ ಭಟ್ 620 ಅಂಕ ಪಡೆದು 6 ನೇ ರ್‍ಯಾಂಕ್ ಪಡೆದಿದ್ದಾರೆ. ಆಕಾಶ್ ಎ ಎಲ್ 618 ಅಂಕ ಪಡೆದು 8 ರ್‍ಯಾಂಕ್ ಪಡೆದರು. ಉಳಿದಂತೆ ಸಮರ್ಥ್ 601 ಅಂಕ, ಸಕೇತ್ ಎನ್ ಬಿ 590 ಅಂಕ, ವಿಕ್ಷೀತಾ ಎಂ.ಎನ್ 587 ಅಂಕ, ತ್ರಿಷಾ 570 ಅಂಕ, ಸುಶಾನ್ 566 ಅಂಕ, ಸೃಷ್ಟಿ ಅಮ್ಮಣ್ಣಾಯ 559 ಅಂಕ, ವಲ್ಲರಿ 548 ಅಂಕ, ಬಿಶಂತ್ 537 ಅಂಕ, ಬಿಂದುಶ್ರೀ 521 ಅಂಕ ಪಡೆದರು.