ಕೊಡಗು ಸಂಪಾಜೆ ಗ್ರಾಮ ಪಂಚಾಯತ್ ಮಳೆಗಾಲದ ಮುಂಜಾಗ್ರತ ಕ್ರಮವಾಗಿ ಇಲಾಖಾಧಿಕಾರಿಗಳ ಜೊತೆ ಸಭೆ

0

ಕೊಡಗು ಸಂಪಾಜೆ ಗ್ರಾಮ ಪಂಚಾಯತ್ ನಲ್ಲಿ ಮಳೆ ಮುoಜಾಗೃತಾ ಕ್ರಮವಾಗಿ ವಿವಿಧ ಇಲಾಖಾಧಿಕಾರಿಗಳ ಜೊತೆ ಟಾಸ್ಕ್ ಪೋರ್ಸ್ ಸಭೆಯು ಮೇ 27 ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಗ್ರಾಂ.ಪಂ ಅಧ್ಯಕ್ಷೆ ರಮಾದೇವಿ ಬಾಲಚಂದ್ರ ಕಳಗಿ ಅಧ್ಯಕ್ಷತೆ ವಹಿಸಿ. ಮಳೆಗಾಲದ ಮುಂಜಾಗೃತಾ ಕ್ರಮಗಳ ಬಗ್ಗೆ ಇಲಾಖಾಧಿಕಾರಿಗಳ ಜೊತೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಳಿಕ ಕಂದಾಯ ಇಲಾಖೆ, ಕೃಷಿ ಇಲಾಖೆ, ಕೆ. ಇ . ಬಿ , ಆರೋಗ್ಯ ಇಲಾಖೆ ಸೇರಿದಂತೆ ಇತರ ಇಲಾಖೆಗಳ ಜೊತೆ ಮಳೆಗಾಲದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಬಳಿಕ ಕೊಯನಾಡು ಶಾಲೆಯ ಕೆಲಸದ ಬಗ್ಗೆ ಮತ್ತು ಸಂಪಾಜೆ ಶಾಲೆಯ ರಿಪೇರಿಯ ಬಗ್ಗೆ, ಕಂದಾಯ ಇಲಾಖೆಗೆ ಒಳಪಟ್ಟ ಮನೆಗೆ ಯಾವುದೇ ಅನಾಹುತ ವಾದರೂ ತಕ್ಷಣ (24×7) ಅಲರ್ಟ್ ಆಗಿರುವುದು ಜನರಿಗೆ ಸಹಾಯದ ಸ್ಪಂದನೆ ನೀಡುವ ಬಗ್ಗೆ , ಸಂಪಾಜೆ , ಕೊಯನಾಡು ಎನ್ . ಹೆಚ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯದ ಮರವನ್ನು ಅರಣ್ಯ ಇಲಾಖೆ ಅಧಿಕಾರಿಗಳು ತೆಗಿಸುವುದು, ವಿದ್ಯುತ್ ಸಮಸ್ಯೆಗಳ, ನೀರಿನ ಸಮಸ್ಯೆ, ಆರೋಗ್ಯ ಮತ್ತು ಸ್ವಚ್ಛತೆ ಮಾಹಿತಿ ನೀಡುವ ಬಗ್ಗೆ
ಮೊದಲಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಚರ್ಚೆ ನಡೆಯಿತು.

ಈ ಸಂದರ್ಭದಲ್ಲಿ ಗ್ರಾಂ.ಪಂ ಉಪಾಧ್ಯಕ್ಷೆ ಪೂರ್ಣಿಮಾ ಅರೆಕಲ್ಲು, ಗ್ರಾಂ.ಪಂ ಪಂಚಾಯತ್ ಸದಸ್ಯರಾದ ಸುರೇಶ್ ಪಿ.ಎಲ್, ಜಯಕುಮಾರ್ ಚಿದ್ಕಾರ್ ,ನವೀನ್‌ಕುಮಾರ್ ಬಿ.ಎಂ, ನಿರ್ಮಲಾ ಭರತ್, ವಿವಿಧ ಇಲಾಖೆಗಳ ಅಧಿಕಾರಿ – ಸಿಬ್ಬಂದಿ ವರ್ಗ , ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಮುಖ್ಯೋಪಾಧ್ಯಾಯರು, ವಾಟರ್ ಮೇನ್, ಬಿಲ್ ಕಲೆಕ್ಟರ್, ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಗ್ರಾಂ.ಪಂ. ಕಾರ್ಯದರ್ಶಿ ಸೀತಾರಾಮ ಸರ್ವರನ್ನು ಸ್ವಾಗತಿಸಿ, ವಂದಿಸಿದರು.