ಬ್ಯಾಂಕ್ ಆಫ್ ಬರೋಡ ಸುಳ್ಯ ಶಾಖಾ ಹಿರಿಯ ವ್ಯವಸ್ಥಾಪಕರಾಗಿ ಸರವಣ ಬವಾನಂದ ಸೆಲ್ವಂ ಅಧಿಕಾರ ಸ್ವೀಕಾರ

0

ಸುಳ್ಯ ಸರ್ಕಾರಿ ಬಸ್ ನಿಲ್ದಾಣದ ಬಳಿ ಇರುವ ಬ್ಯಾಂಕ್ ಆಫ್ ಬರೋಡ ಸುಳ್ಯ ಶಾಖೆಯ ಹಿರಿಯ ವ್ಯವಸ್ಥಾಪಕರಾಗಿ ಸರವಣ ಬವಾನಂದ ಸೆಲ್ವಂ ರವರು ಮೇ 20 ಅಧಿಕಾರ ಸ್ವೀಕರಿಸಿದ್ದಾರೆ.

ಮೂಲತ: ತಮಿಳುನಾಡಿನ ಮಧುರೈ ನವರಾಗಿರುವ ಇವರು 2013ರಲ್ಲಿ ಚೆನ್ನೈ ಯ ರೋಯಪೇಟೈ ಶಾಖೆಯಲ್ಲಿ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸಿ ಬಳಿಕ ಚೆನ್ನೈ ರಿಜನಲ್ ಕಚೇರಿಯಲ್ಲಿ ವ್ಯವಸ್ಥಾಪಕರಾಗಿ, ವೇಲಚೆನಿ ಶಾಖೆಯಲ್ಲಿ ಶಾಖಾ ವ್ಯವಸ್ಥಾಪಕರಾಗಿ ಮೂರು ವರ್ಷ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಬೆಂಗಳೂರಿನ ಕೃಷ್ಣಗಿರಿ ಶಾಖೆಯಲ್ಲಿ ಹಿರಿಯ ಶಾಖಾ ವ್ಯವಸ್ಥಾಪಕರಾಗಿ ಮೂರು ವರ್ಷ ಕರ್ತವ್ಯ ನಿರ್ವಹಿಸಿ ಇದೀಗ ಸುಳ್ಯ ಶಾಖೆಗೆ ವರ್ಗಾವಣೆಗೊಂಡುಬಂದಿರುತ್ತಾರೆ