ರಾತ್ರಿ ಪೂಮಲೆಯಿಂದ ಇಳಿದು ಬಂದು ತೋಟಗಳಿಗೆ ಹಾನಿ ಮಾಡಿದ ಆನೆಗಳ ಹಿಂಡು ಇಂದು ಬೆಳ್ಳಂಬೆಳಿಗ್ಗೆ ಅರಂಬೂರು ಹೆದ್ದಾರಿ ದಾಟಿ ಪೂಮಲೆ ಕಾಡಿಗೆ ಹೋದ ಘಟನೆ ವರದಿಯಾಗಿದೆ.
















ನಿನ್ನೆ ರಾತ್ರಿ ೭ ಆನೆಗಳ ಹಿಂಡು ಪೂಮಲೆ ಕಾಡಿನಿಂದ ಹೆದ್ದಾರಿ ದಾಟಿ ಅರಂಬೂರಿನ ಎಸ್.ಎನ್.ಜಯರಾಮ, ಎಸ್.ಎನ್. ಮೋಹನ್‌ರಾಂ, ಎಸ್.ಎನ್. ಸೀತಾರಾಮ, ರವಿ ಬೆಳ್ಳಿಪ್ಪಾಡಿಯವರ ತೋಟಕ್ಕೆ ನುಗ್ಗಿ ಹಾನಿ ಮಾಡಿದ್ದು, ಭಾಗ್ಯರಾಜ್‌ರವರ ಗೇಟ್‌ಗೂ ಹಾನಿ ಮಾಡಿದೆ.
ಬೆಳಿಗ್ಗೆ ತೋಟದಿಂದ ಹಿಂತಿರುಗಿದ ಆನೆಗಳ ಹಿಂಡು ರಾಷ್ಟ್ರೀಯ ಹೆದ್ದಾರಿಯನ್ನು ದಾಟಿ ಪೂಮಲೆ ಕಾಡಿಗೆ ಹಿಂತಿರುಗಿದವು. ರಸ್ತೆ ದಾಟುವ ದೃಶ್ಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.









