ಗುತ್ತಿಗಾರು ಹಾಗೂ ಸುಬ್ರಮಣ್ಯ ಮೆಸ್ಕಾಂ ವಿಭಾಗದ ಲೈನ್ ಮ್ಯಾನ್‌ಗಳ ವರ್ಗಾವಣೆಗೆ ತಡೆ ನೀಡುವಂತೆ ಮನವಿ

0

ಕರ್ನಾಟಕ ವಿದ್ಯುತ್‌ಚ್ಛಕ್ತಿ ಮಂಡಳಿ ಸುಳ್ಯ ತಾಲೂಕಿನ ಗುತ್ತಿಗಾರುಹಾಗೂ ಕಡಬ ತಾಲೂಕಿನ ಸುಬ್ರಹ್ಮಣ್ಯ ವ್ಯಾಪ್ತಿಯ ಮೆಸ್ಕಾಂ ವಿಭಾಗದಲ್ಲಿರುವ ಆರು ಮಂದಿ ಲೈನ್ ಮ್ಯಾನ್‌ಗಳನ್ನು ವರ್ಗಾವಣೆಗೊಳಿಸಿದ್ದು, ಇದನ್ನು ತಡೆಹಿಡಿಯುವಂತೆ ಸಲಹಾ ಸಮಿತಿಯ ಸದಸ್ಯರಾದ ದಿನೇಶ್ ಹಾಲೆಮಜಲುರವರು ಸೂಡಾ ಅಧ್ಯಕ್ಷ ಮುಸ್ತಫ ಕೆ.ಎಂ.ರವರು ಬೆಂಗಳೂರಿನಲ್ಲಿ ಕೆ.ಎಂ.ಜಾರ್ಜ್‌ರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ತಕ್ಷಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.


ಮಳೆಗಾಲ ಹಾಗೂ ಇನ್ನಿತರ ಸಂದರ್ಭದಲ್ಲಿ ಈ ಭಾಗದಲ್ಲಿ ಪದೇ ಪದೇ ಮರಗಳು ಬಿದ್ದು ವಿದ್ಯುತ್ ವ್ಯತ್ಯಯವಾಗುತ್ತಿರುವ ಈ ಸಂದರ್ಭದಲ್ಲಿ ಲೈನ್ ಮ್ಯಾನ್‌ಗಳನ್ನು ವರ್ಗಾವಣೆ ಮಾಡುವುದು ಸೂಕ್ತವಲ್ಲ ಇದರಿಂದಾಗಿ ಗ್ರಾಹಕರಿಗೆ ತುಂಬಾ ತೊಂದರೆಗಳಾಗುತ್ತವೆ. ಆದ್ದರಿಂದ ತಾವುಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ತಕ್ಷಣ ವರ್ಗಾವಣೆಯನ್ನು ತಡೆಹಿಡಿಯಬೇಕೆಂದು ಮನವಿ ತಿಳಿಸಲಾಗಿದೆ.