ಕೈಕಂಬ ಯುವಕ ಮಂಡಲದ ಸುವರ್ಣ ಮಹೋತ್ಸವ ಮೇ.25 ರಂದು ನಡೆಯಿತು.
ಕಾರ್ಯಕ್ರಮವನ್ನು ಬಿಳಿನೆಲೆ ಗ್ರಾಮ ಪಂಚಾಯತ್ ಅಧ್ಯಕ್ಷೇ ಶಾರದಾ ದಿನೇಶ್ ಉದ್ಘಾಟಿಸಿದರು.









ಅಂದು ಬೆಳಗ್ಗೆ ನಡೆದ ಗಣಪತಿ ಹವನ ಹಾಗೂ ಭಜನೆಯ ನಡೆಯಿತು. ನೂತನ ಯುವಕ ಮಂಡಲದ ಕಟ್ಟಡವನ್ನು ಶ್ರೀಮತಿ ಲೀಲಾವತಿ ದೇವರಾಜ್ ಮುದ್ದಾಜೆ ವೆಂಕಟಪುರ ಇವರು ಉದ್ಘಾಟಿಸಿದರು. ಸುವರ್ಣ ಮಹೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ಶಿವಪ್ರಸಾದ್ ನಡು ತೋಟ ವಹಿಸಿದ್ದರು ಮುಖ್ಯ ಮುಖ್ಯ ಅತಿಥಿಗಳಾಗಿ ಸುಳ್ಯ ಬಿಜೆಪಿ ಮಂಡಲದ ಅಧ್ಯಕ್ಷ ವೆಂಕಟ ವಳಲಂಬೆ, ಕಡಬ ತಾಲೂಕು ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಕಡಬ ತಾಲೂಕು ಯುವಜನ ಸಂಯುಕ್ತ ಮಂಡಲದ ಅಧ್ಯಕ್ಷ ಶಿವಪ್ರಸಾದ್ ಮೈಲೇರಿ, ಬಿಳಿನೆಲೆ ಸೊಸೈಟಿ ಅಧ್ಯಕ್ಷ ವಾಡ್ಯಪ್ಪ ಗೌಡ ಎರ್ಮೈಲು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ ,ಗ್ರಾಮ ಪಂಚಾಯತ್ ಸದಸ್ಯರುಗಳಾದ ಮುರಳಿಧರ ಎರ್ಮೈಲ್, ಭವ್ಯ ಕುಕ್ಕಾಜೆ, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ವಿಜಯಕುಮಾರ ನಡುತೋಟ, ಪೂರ್ವ ಅಧ್ಯಕ್ಷ ಪದ್ಮನಾಭ ಕಳಿಗೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಯುವಕ ಮಂಡಲ ಕಟ್ಟಡಕ್ಕೆ 20000 ಗಿಂತಲೂ ಮಿಕ್ಕಿ ದನ ಸಹಾಯ ನೀಡಿದವರು, 10000 ಗಿಂತಲೂ ಮಿಕ್ಕಿ ದನ ಸಹಾಯ ನೀಡಿದವರು ಹಾಗೂ 5000ಕ್ಕೂ ಮಿಕ್ಕಿದನ ಸಹಾಯ ನೀಡಿದವರನ್ನ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಯುವಕಮಂಡಲ ಪೂರ್ವ ಅಧ್ಯಕ್ಷ ಪ್ರವೀಣ್ ಕುಮಾರ್ ಪಿಲಿಕಜೆ ಸ್ವಾಗತಿಸಿದರು.
ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ವಿಜಯಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಹರೀಶ ಚೇರು ಧನ್ಯವಾದ ಸಮರ್ಪಿಸಿದರು. ಜಯಪ್ರಕಾಶ್ ಎರ್ಮೈಲ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಸ್ಥಳೀಯ ಪುಟಾಣಿಗಳು, ವಿದ್ಯಾರ್ಥಿಗಳು, ಯುವಕ ಮಂಡಲದ ಸದಸ್ಯರುಗಳಿಗೆ ನೃತ್ಯ ಕಾರ್ಯಕ್ರಮಗಳು ಹಾಗೂ ವಿವಿಧ ಮನೋರಂಜನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಬೆಳ್ಳಾರೆ ಡ್ಯಾನ್ಸ್ ತಂಡದವರಿಂದ ಡ್ಯಾನ್ಸ್ ಬೀಟ್ ವಿಶೇಷ ಕಾರ್ಯಕ್ರಮ ಜರಗಿತು. ಕೊನೆಯಲ್ಲಿ ದಿನೇಶ್ ಕೊಡ ಪದವ್ ಅವರ ನೇತೃತ್ವದಲ್ಲಿ ವಿವಿಧ ರಂಗ ಕಲಾವಿದರಗಳನ್ನ ಸೇರಿಸಿ ಯಕ್ಷ ತಲಿಕೆ ಕಾರ್ಯಕ್ರಮ ಜರಗಿತು.ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷರು , ಪೂರ್ವ ಅಧ್ಯಕ್ಷರುಗಳು, ಹಾಗೂ ಸರ್ವ ಸದಸ್ಯರು ಹಾಜರಿದ್ದರು.










