ಕಳೆದ ಎರಡು ದಿನಗಳ ಹಿಂದೆ ಕೋಮು ವೈಷಮ್ಯಗಳಿಂದ ಹತ್ಯೆಗೀಡಾದ ಬಂಟ್ವಾಳದ ಅಬ್ದುಲ್ ರಹ್ಮಾನ್ ಸೇರಿದಂತೆ ದ.ಕ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಸರಣಿ ಕೋಮು ಹತ್ಯೆಗಳನ್ನು ಮಟ್ಚ ಹಾಕಲು ರಾಜ್ಯ ಸರಕಾರ ವಿಫಲವಾಗಿದೆ ಎಂದು ಆರೋಪಿಸಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸ್ಥಾನಕ್ಕೆ ಸಿದ್ದಿಕ್ ಕೊಕ್ಕೋರವರು ರಾಜೀನಾಮೆ ನೀಡಿರುವುದಾಗಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.









ಮಂಗಳೂರಿನ ಶಾದಿ ಮಹಲ್ ನಲ್ಲಿ ನಡೆದ ಕಾಂಗ್ರೆಸ್ ಮುಸ್ಲಿಂ ಮುಖಂಡರ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಮುಖಂಡರುಗಳು ಸೇರಿ ಕೈ ಗೊಂಡಿರುವ ನಿರ್ಣಯ ಸ್ವಾಗತಾರ್ಹವಾಗಿದ್ದು ನಾನು ಕೂಡ ರಾಜೀನಾಮೆ ನೀಡಿ ನ್ಯಾಯಕ್ಕಾಗಿ ಅಗ್ರಹಿಸುವುದಾಗಿ ಅವರು ಸುದ್ದಿಗೆ ತಿಳಿಸಿದ್ದಾರೆ.










