ಬೆಳ್ಳಾರೆ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯ ವಿದ್ಯಾರ್ಥಿ ಶಿಕ್ಷಕಿಯರು ರಾಜ್ಯದ ವಿವಿಧ ಶಾಲೆಗಳಲ್ಲಿ ಶಿಕ್ಷಕಿಯರುಗಳಾಗಿ ಆಯ್ಕೆ

0


ವರ್ಲ್ಡ್ ಸ್ಕಿಲ್ ಕೌನ್ಸಿಲ್ ನಿಂದ ಮಾನ್ಯತೆ ಪಡೆದಿರುವ ಹಾಗೂ ಭಾರತ ಸರಕಾರದಿಂದ ಪ್ರವರ್ತಿತ ರಾಷ್ಟೀಯ ಅಭಿವೃದ್ಧಿ ಏಜನ್ಸಿ ಭಾರತ್ ಸೇವಕ್ ಸಮಾಜದ ಸುಳ್ಯ ತಾಲೂಕಿನ ಏಕೈಕ ಅಂಗೀಕೃತ ಸಂಸ್ಥೆಯಾದ ಬೆಳ್ಳಾರೆಯ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ 2024-25ನೇ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ(ಡಿ.ಎಂ.ಇ.ಡಿ) ಪೂರ್ಣಗೊಳಿಸಿದ ವಿದ್ಯಾರ್ಥಿ ಶಿಕ್ಷಕಿಯರು ರಾಜ್ಯದ ವಿವಿಧ ಪ್ರತಿಷ್ಠಿತ ಶಾಲೆಗಳಲ್ಲಿ ಶಿಕ್ಷಕಿಯರುಗಳಾಗಿ ಆಯ್ಕೆಯಾಗಿದ್ದಾರೆ.

ಸುನೀತಾ ಪಿ ಕೆವಿಜಿ ಐಪಿಸ್ ಸುಳ್ಯ, ಜನಿತಾ ಹೆಚ್ ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆ ಅಲಂಕಾರು, ಅಸ್ಮಾ ಪಿ. ಎಂ ದಾರುಲ್ ಆಯ್ಮಾನ್ ಇಸ್ಲಾಮಿಕ್ ಸ್ಕೂಲ್ ಕಾಸರಗೋಡು, ದಿವ್ಯಾ ಕೆ ರಚನಾ ಪಬ್ಲಿಕ್ ಸ್ಕೂಲ್ ಹಾಸನ, ಅಕ್ಷತಾ ಎಂ ಕೆ. ಎಸ್ ಜಿ ಆಂಗ್ಲ ಮಾಧ್ಯಮ ಶಾಲೆ ನಿಂತಿಕಲ್, ಭವಿತಾ ಕೆ ರಚನಾ ಪಬ್ಲಿಕ್ ಸ್ಕೂಲ್ ಹಾಸನ, ಮಮತಾ ಬಿ ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆ ಅಲಂಕಾರು, ವೇದಾಕ್ಷಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೈಕಾರ, ಮಮತಾ ಹಿರಿಯ ಪ್ರಾಥಮಿಕ ಶಾಲೆ ಪೆರ್ಲoಪಾಡಿ,ಶಿಲ್ಪಾ ಎ ಆರ್ ಬೆಥನಿಆಂಗ್ಲ ಮಾಧ್ಯಮ ಶಾಲೆ ಪಾಂಗಳಾಯಿ ದರ್ಬೆ ಪುತ್ತೂರು, ಶ್ವೇತಾ ಎಸ್ ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ ಈಶ್ವರಮಂಗಲ, ರಂಜಿನಿ ಬಿ ವಿವೇಕ್ ಆಂಗ್ಲ ಮಾಧ್ಯಮ ಶಾಲೆ ಅಜ್ಜಾವರ, ಅಂಜಲಿ ಎ ಹೆಚ್ ಎಂ.ಜಿ.ಎಂ ಆಂಗ್ಲ ಮಾಧ್ಯಮ ಶಾಲೆ ಮಲ್ನಾಡ್ ಕೊಡಿಯಾಲಬೈಲ್, ಗಾಯತ್ರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೊಗರು ಸವಣೂರು, ಶ್ವೇತಾ ಕುಮಾರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಾರ್ವಕ, ಸುಮಿತ್ರಾ ಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಏನೆಕಲ್ಲು ಇಲ್ಲಿಗೆ ಶಿಕ್ಷಕಿಯರುಗಳಾಗಿ ಆಯ್ಕೆಯಾಗಿದ್ದಾರೆ. ಮೊಂಟೆಸ್ಸರಿ ಮಾದರಿಯಲ್ಲಿ ವಿಭಿನ್ನ ರೀತಿಯಲ್ಲಿ ತರಗತಿಗಳನ್ನು ನಡೆಸುತ್ತಿರುವ ಬೆಳ್ಳಾರೆಯ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ 2025-26ನೇ ಸಾಲಿನ ಶಿಕ್ಷಕಿಯರ ತರಬೇತಿಯ ತರಗತಿಯು ಜೂ.5ರಿಂದ ಆರಂಭಗೊಳ್ಳಲಿದೆ. ತರಬೇತಿ ಪಡೆಯಲಿಚ್ಚಚಿಸುವ ಆಸಕ್ತರು ಸಂಸ್ಥೆಯ ಕಚೇರಿಯನ್ನು ಸಂಪರ್ಕಿಸಬಹುದೆಂದು ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.