







ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣಗೋಡೆ ಕುಸಿಯುವ ಹಂತದಲ್ಲಿದ್ದು, ಈ ಬಗ್ಗೆ ಆವರಣಗೋಡೆಯನ್ನು ಸರಿ ಪಡಿಸುವಂತೆ ಕೇನ್ಯ ರವೀಂದ್ರನಾಥ ಶೆಟ್ಟಿಯವರ ಪುತ್ರ ರಂಜಿತ್ ಕುಮಾರ್ ಶೆಟ್ಟಿ ಸುಳ್ಯ ತಹಶಿಲ್ದಾರರು, ಪಂಜ ಗ್ರಾ.ಪಂ. ಮತ್ತು ಆರೋಗ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಈ ಹಿಂದೆ ಇದ್ದ ಆವರಣ ಗೋಡೆ ಜರಿದು ಬಿದ್ದು, ರಂಜಿತ್ ಕುಮಾರ್ ಶೆಟ್ಟಿಯವ ಕೊಳವೆ ಬಾವಿಗೆ ಹಾನಿಯಾಗಿರುವುದಲ್ಲದೆ ಶೌಚಾಲಯ ಸಂಪೂರ್ಣ ನಾಶವಾಗಿದೆ. ಇದೀಗ 2 ತಿಂಗಳ ಹಿಂದೆಯಷ್ಟೇ ಕಟ್ಟಿದ ನೂತನ ಆವರಣ ಗೋಡೆಯೂ ವಾಲಿ ನಿಂತಿದ್ದು, ಬೀಳುವ ಹಂತದಲ್ಲಿದೆ. ಕಾಂಪೌAಡ್ ಬಿದ್ದು ಯಾವುದೇ ರೀತಿಯ ಹಾನಿಯುಂಟಾದಲ್ಲಿ ಆರೋಗ್ಯ ಇಲಾಖೆಯೇ ನೇರ ಹೊಣೆಯಾಗಲಿದೆ. ಆದ್ದರಿಂದ ಸೂಕ್ತ ಕ್ರಮ ಕೈಗೊಂಡು ತಮಗಾಗಬಹುದಾದ ತೊಂದರೆಯನ್ನು ನಿವಾರಿಸಿಕೊಡಬೇಕೆಂದು ಅರ್ಜಿಯಲ್ಲಿ ತಿಳಿಸಿದ್ದಾರೆ.










