ನಾರ್ಕೋಡು: ಕಲ್ಲೆಂಬಿ ತಿರುವಿನಲ್ಲಿ ಮರಕ್ಕೆ ಡಿಕ್ಕಿ ಹೊಡೆದ ಎರ್ಟಿಗಾ ಕಾರು

0

8 ಮಂದಿ ಪ್ರಯಾಣಿಕರು ಅಪಾಯದಿಂದ ಪಾರು

ಆಲೆಟ್ಟಿಯ ನಾರ್ಕೋಡು ಕೋಲ್ಚಾರು ಅಂತರಾಜ್ಯ ಸಂಪರ್ಕದ ರಸ್ತೆ ಮಧ್ಯೆ ಕಲ್ಲೆಂಬಿ ಎಂಬಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.

ಕೇರಳದ ಬಂದಡ್ಕ ಕಡೆಯಿಂದ ಸುಳ್ಯಕ್ಕೆ ಬರುತ್ತಿದ್ದ ಕೆ.ಎ.19 ಎಂ.ಎಲ್ 0290 ನಂಬರಿನ ಎರ್ಟಿಗಾ ಕಾರು ಕಲ್ಲೆಂಬಿ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ಇಳಿದು ಪಕ್ಕದಲ್ಲಿ ದ್ದ ರಬ್ಬರ್ ‌ಮರಕ್ಕೆ ಡಿಕ್ಕಿ ಹೊಡೆಯಿತು. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರು ಸೇರಿದಂತೆ 8 ಮಂದಿ ಪ್ರಯಾಣಿಕರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿದ್ದವರು ಮಂಗಳೂರು ಕಡೆಯವರಾಗಿದ್ದು ಕೇರಳಕ್ಕೆ ವೀಕೆಂಡ್ ಟ್ರಿಪ್ ಮುಗಿಸಿ ಹಿಂತಿರುಗುವ ವೇಳೆಯಲ್ಲಿ ಘಟನೆ ಸಂಭವಿಸಿರುವುದಾಗಿ ತಿಳಿದು ಬಂದಿದೆ. ಕಾರಿನ ಮುಂಭಾಗ ಮತ್ತು ಹಿಂದುಗಡೆ ಜಖಂಗೊಂಡಿದೆ.