ಮಣ್ಣು ಜರಿದು ಇಂದೋ, ನಾಳೆಯೋ ಎನ್ನುತ್ತಿದೆ ಬೊಳುಬೈಲು ರಸ್ತೆ ಬದಿಯ ಅಪಾಯಕಾರಿ ಮರ

0

ಸ್ಥಳೀಯಾಡಳಿತ ಈ ಕಡೆ ಗಮನ ಹರಿಸಬೇಕಾಗಿದೆ

ಬೊಳುಬೈಲು ಮಾಣಿ ಮೈಸೂರು ಹೆದ್ದಾರಿ ಬಳಿ ಬೃಹತ್ ಮರವೊಂದು ಅಪಾಯಕಾರಿ ಸ್ಥಿತಿಯಲ್ಲಿ ನಿಂತಿದೆ.

ಹೆದ್ದಾರಿಗೆ ತಾಗಿಕೊಂಡಿರುವ ಮಣ್ಣಿನ ದಿಡ್ಡಿನ ಮೇಲೆ ಈ ಮರ ನಿಂತಿದ್ದು ಮರದ ಬುಡದಿಂದಲೇ ಮಣ್ಣುಗಳು ಕುಸಿದು ಅಪಾಯದ ಮುನ್ಸೂಚನೆ ನೀಡುತ್ತಿದೆ.

ರಾಷ್ಟ್ರೀಯ ಹೆದ್ದಾರಿಯಾದ ಕಾರಣ ನೂರಾರು ವಾಹನಗಳು ಸಂಚರಿಸುತ್ತಿದ್ದು, ಸಮೀಪದಲ್ಲಿ ಎಚ್‌ಟಿ ವಿದ್ಯುತ್ ಲೈನ್ ಹಾದು ಹೋಗುತ್ತಿದ್ದು ಮರ ಬಿದ್ದಲ್ಲಿ ಪ್ರಾಣ ಹಾನಿ ಆಗುವ ಸಂಭವ ಇರುತ್ತದೆ.
ಆದುದರಿಂದ ಇದಕ್ಕೆ ಸಂಬಂಧಪಟ್ಟವರು ಕೂಡಲೇ ಈ ಮರವನ್ನು ತೆರವು ಗೊಳಿಸಿ ಮುಂದಕ್ಕೆ ಆಗುವ ಅಪಾಯವನ್ನು ತಪ್ಪಿಸಬೇಕಾಗಿ ಸ್ಥಳೀಯರು ಆಗ್ರಹಿಸಿದ್ದಾರೆ