ವಿದ್ಯುತ್, ಗ್ರಾಮೀಣ ಭಾಗಕ್ಕೆ ಬಸ್ಸುಗಳ ಕೊರತೆ ಮುಂತಾದ ಸಮಸ್ಯೆಗಳ ಕುರಿತು ಚರ್ಚೆ

ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯು ಮೇ.31ರಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ನೇತೃತ್ವದಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಶಕ್ತಿ ಯೋಜನೆಯ ಮೂಲಕ ಜನರಿಗೆ ಸಿಗುವ ಬಸ್ಸು ಸೌಕರ್ಯ ದಲ್ಲಿ ಗ್ರಾಮೀಣ ಭಾಗಕ್ಕೆ ಬಸ್ಸುಗಳ ಕೊರತೆ, ಹಾಗೂ ಗ್ರಹ ಲಕ್ಷ್ಮಿ ಯೋಜನೆಗೆ ಸಂಭAಧಿಸಿದAತೆ ಸುಳ್ಯದಲ್ಲಿ ನಿರಂತರ ಉಂಟಾಗುತ್ತಿರುವ ವಿದ್ಯುತ್ ಕೊರತೆ ಈ ಎಲ್ಲಾ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆಗಳು ನಡೆಯಿತು.
ಪ್ರಗತಿ ಪರಿಶೀಲನಾ ಸಭೆಯಲ್ಲಿ29-೦4-2025 ರ ಪಾಲನ ವರದಿಯ ಕುರಿತು ಚರ್ಚಿಸಿ ಅಧಿಕಾರಿಗಳು ಸರಕಾರಿ ಬಸ್ಸಿನ ಕುರಿತು ಕ್ರಮ ಕೈಗೊಳ್ಳದೇ ಇರುವ ಬಗ್ಗೆ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷರ ಉಪಸ್ಥಿತಿಯಲ್ಲಿ ಸಭೆ ನಡೆಸಲು ತೀರ್ಮಾನಿಸಿದರು.
ಗೃಹಲಕ್ಷ್ಮಿ ಯೋಜನೆಯಲ್ಲಿ ಎಪ್ರಿಲ್ ತಿಂಗಳ 25287 ಫಲಾನುಭವಿಗಳಿಗೆ ಜಮೆ ಮಾಡಲಾಗಿದೆ ಎಂದು ಸಭೆಗೆ ಸಿಡಿಪಿಒ ಶೈಲಜಾ ಮಾಹಿತಿ ನೀಡಿದರು.
ಆಧಾರ್ ಸೀಡಿಂಗ್ ಆಗದೇ ಇರುವ 4 ಫಲಾನುಭವಿಗಳಿಗೆ ಬ್ಯಾಂಕ್ ಹಾಗೂ ಆಧಾರ್ ಕೇಂದ್ರದಲ್ಲಿ ಪ್ರಾಶಸ್ತ್ಯಸ ಮೂಲಕ ಮಾಡಲು ನೆರವಾಗುವುದಾಗಿ ಸಮಿತಿ ಕಾರ್ಯದರ್ಶಿ ರಾಜಣ್ಣ ಹೇಳಿದರು.















ಸಭೆಯಲ್ಲಿ ಸದಸ್ಯರುಗಳು ಸಲಹೆಯನ್ನು ನೀಡಿ ಅನ್ನಭಾಗ್ಯ ಯೋಜನೆಯಲ್ಲಿ ಪ್ರತಿ ತಿಂಗಳು ಕುಚ್ಚಲು ಮತ್ತು ಬೆಳ್ತಿಗೆ ಅಕ್ಕಿ ಸಮಾನವಾಗಿ ವಿತರಿಸುವಂತೆ ವಿನಂತಿಸಿದರು.
ಅಕ್ಕಿಯ ಪ್ರಮಾಣ ಹೆಚ್ಚಳವಾಗಿದ್ದು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು ಹೆಚ್ಚುವರಿ ವಾಹನದ ವ್ಯವಸ್ಥೆ ಕಲ್ಪಿಸುವಂತೆ ಇಲಾಖೆಗೆ ಬರೆಯಲು ಸಭೆಯಲ್ಲಿ ತೀರ್ಮಾನಿಸಿದರು.
ಮೆಸ್ಕಾಂ ಸಮನ್ವಯದ ಕೊರತೆ ಅಧಿಕಾರಿಗಳಿಗೆ ತರಾಟೆ: ಮೆಸ್ಕಾಂ ಅಧಿಕಾರಿಗಳು ಹಲವಾರು ಸಭೆಗಳಲ್ಲಿ ಗಾಂಧಿನಗರ ಶಾಲೆಯ ಬಳಿಯಲ್ಲಿ ಇರಿಸಲಾದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ಶಾಸಕರು ಮತ್ತು ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ತೀರ್ಮಾನವಾಗಿದ್ದರೂ ಇದುವರೆಗೂ ಅದನ್ನು ತೆಗೆದಿಲ್ಲ ಇದಕ್ಕೆ ಕಾರಣವೇನು ಎಂದು ಅಧ್ಯಕ್ಷ ಶಾಹುಲ್ ಹಮೀದ್ ಪ್ರಶ್ನಿಸಿದರು .ಬಳಿಕ ಸಭಾ ನಿಯಾಮವಳಿಯಂತೆ ಜು.೩ ರ ಸಂಜೆಯೊಳಗೆ ತೆರವು ಗೊಳಿಸುವುದಾಗಿ ಸಭೆಯಲ್ಲಿ ಒಪ್ಪಿಕೊಂಡು ನಿರ್ಣಯ ಬರೆಯಲಾಯಿತು.
ಸುಳ್ಯದಲ್ಲಿ ನಿರಂತರ ಸಮಸ್ಯೆ ನೀಡುತ್ತಿರುವ ವಿದ್ಯುತ್ ಕೊರತೆ ಬಗ್ಗೆ ಸುದೀರ್ಘ ಚರ್ಚೆನಡೆದು ವಿದ್ಯುತ್ ತಂತಿಗಳು ,ಲೋ ವಾಲ್ಟೇಜ್ ಸಮಸ್ಯೆಗಳು ಸೇರಿದಂತೆ ಇತರೆ ಸಮಸ್ಯೆಗಳನ್ನು ಸರಿ ಪಡಿಸಲು ಸಂಭ0ದಪಟ್ಟ ಇಲಾಖೆಯವರಿಗೆ ಸೂಚಿಸಲಾಯಿತು.
ಕೆಎಸ್‌ಆರ್‌ಟಿಸಿ ಹಾಗೂ ಮೆಸ್ಕಾಂ ವಿರುದ್ದ ಸದಸ್ಯರು ಗರಂ: ಶಕ್ತಿ ಯೋಜನೆಯ ಮೂಲಕ ಜನತೆ ಉಚಿತ ಪ್ರಯಾಣ ಬೆಳೆಸುತ್ತಿದ್ದು ನಿಮಗೆ ಸರಕಾರ ಟಿಕೆಟ್ ಮೊತ್ತ ಪಾವತಿ ಮಾಡುತಿದೆ ಆದರೆ ನೀವು ಸರಿಯಾಗಿ ಗ್ರಾಮಗಳಿಗೆ ಬಸ್ಸುಗಳನ್ನು ಹಾಕುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುಡಿಯುವ ನೀರಿನ ಯೋಜನೆಗೆ ಗ್ರಾಮೀಣ ಭಾಗದ ರಸ್ತೆಬದಿಯಲ್ಲಿ ತೋಡಿರುವ ಗುಂಡಿಗಳಿ0ದಾಗಿ ಕೆಲವು ಕಡೆಗಳಿಗೆ ಬಸ್ಸುಗಳು ಬರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.ಇದಕೆಲ್ಲಾ ಶಾಶ್ವತ ಪರಿಹಾರ ಯಾವಾಗ ಎಂದು ಸದಸ್ಯರು ಪ್ರಶ್ನೆ ಮಾಡಿದರು.ಬಳಿಕ ಶಾಸಕರು ಮತ್ತು ಗ್ಯಾರಂಟಿ ಸಮಿತಿ ಉಪಸ್ಥಿತಿಯಲ್ಲಿ ಸಭೆ ನಡೆಸಲು ದಿನಾಂಕ ನಿಗದಿ ಪಡಿಸಲು ಸೂಚನೆ ನೀಡಲಾಯಿತು.
ಇಒ ರಾಜಣ್ಣ ವೇದಿಕೆಯಲ್ಲಿದ್ದರು ಸಭೆಯಲ್ಲಿ ಇಲಾಖಾಧಿಕಾರಿಗಳು ಸಮಿತಿ ಸದಸ್ಯರು ಭಾಗವಹಿಸಿದ್ದರು










