ಬೂಡು ವಾರ್ಡ್ ನಲ್ಲಿ ಮಳೆಗೆ ಮನೆಯ ತಡೆಗೋಡೆ ಕುಸಿತ, ಅಪಾಯದ ಅಂಚಿನಲ್ಲಿ ಮನೆ

0

ಬೂಡು ವಾರ್ಡ್ ನಲ್ಲಿ ಸ್ಥಳೀಯ ನಿವಾಸಿ ರಫೀಕ್ ಎಂಬುವವರ ಮನೆಗೆ ನಿರ್ಮಿಸಲಾಗಿರುವ ತಡೆಗೋಡೆ ಭಾರಿ ಮಳೆಗೆ ಕುಸಿದು ಬಿದ್ದಿದ್ದು ಮನೆ ಅಪಾಯದ ಅಂಚಿನಲ್ಲಿ ನಿಂತಿದೆ.

ಎತ್ತರದ ಪ್ರದೇಶದಲ್ಲಿ ಮನೆ ಇರುವ ಕಾರಣ ಮುಂಜಾಗ್ರತಾ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದ ಹಿಂದೆ ಬಹಳ ಖರ್ಚು ಭರಿಸಿ ತಡೆಗೋಡೆಯನ್ನು ನಿರ್ಮಿಸಲಾಗಿತ್ತು. ಆದರೆ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ತಡೆಗೋಡೆ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು ಘಟನಾ ಸ್ಥಳಕ್ಕೆ ನ.ಪಂ ಮುಖ್ಯ ಅಧಿಕಾರಿ ಸುಧಾಕರ್, ಹಾಗೂ ವಿ ಎ ತಿಪ್ಪೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇವರೊಂದಿಗೆ ಸ್ಥಳೀಯ ನ ಪಂ ಸದಸ್ಯ ರಿಯಾಜ್ ಕಟ್ಟೆಕ್ಕಾರ್ಸ್, ಸಿದ್ದೀಕ್ ಕೊಕ್ಕೋ, ಸ್ಥಳೀಯರಾದ ಸಲೀಮ್ ಪೆರುಂಗೋಡಿ, ರವಿ ಕೊಡಿಯಾಲಬೈಲು ಮೊದಲಾದವರು ಉಪಸ್ಥಿತರಿದ್ದರು.