ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಪದವಿ ಪ್ರದಾನ ಸಮಾರಂಭ

0

ಸಮಾಜದ ಬದಲಾವಣೆಗಳೊಂದಿಗೆ ತಾವೂ ಅಪ್ಡೇಟ್ ಆಗಿ – ಡಾ. ಕೆ.ಎನ್. ಸುಬ್ರಹ್ಮಣ್ಯ

ಇಂಜಿನಿಯರಿಂಗ್ ಪದವಿ ಮಾಡಿದ್ದಲ್ಲಿಗೆ ನಮ್ಮ ಜವಾಬ್ದಾರಿ ಮುಗಿಯುವುದಿಲ್ಲ. ಆಧುನಿಕ ಯುಗದಲ್ಲಿ ನಡೆಯುವ ದಿನ ದಿನದ ಬದಲಾವಣೆಗಳಿಗೆ ನಾವೂ ಬದಲಾಗಬೇಕು.

ಸಮಾಜ ಮತ್ತು ನಮ್ಮ ನಡುವೆ ಉತ್ತಮ ಬಾಂಧವ್ಯ ಇರಬೇಕು. ಆ ಮೂಲಕ ನಮ್ಮ ಜೀವನ ಮಟ್ಟವನ್ನು ಬೆಳೆಸಬೇಕು. ಆಗ ಸಮಾಜ ನಮ್ಮನ್ನು ಗೌರವಿಸುತ್ತದೆ ಎಂದು ಬೆಂಗಳೂರಿನ ಆರ್.ವಿ. ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ.ಎನ್. ಸುಬ್ರಹ್ಮಣ್ಯ ಹೇಳಿದರು.

ಅವರು ಜೂ. 3ರಂದು ಸುಳ್ಯದ ಅಮರಶ್ರೀಭಾಗ್ ನ ಶ್ರೀಮತಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆದ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಪದವಿಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಯಾಗಿ ಭಾಗವಹಿಸಿ ಮಾತನಾಡಿದರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಕಮಿಟಿ ಬಿ ಅಧ್ಯಕ್ಷ ಡಾ. ರೇಣುಕಾಪ್ರಸಾದ್ ಕೆ.ವಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಓದಿದ ಕಾಲೇಜನ್ನು, ಪಾಠ ಮಾಡಿದ ಉಪನ್ಯಾಸಕರನ್ನು, ಮರೆಯದೆ ನೆನಪಿಟ್ಟು, ಪರಿಚಯ ಮಾಡಿ ಮಾತಾಡಿದಾಗ, ನಿಮ್ಮ ಮೂಲಕ ವಿದ್ಯಾರ್ಥಿಗಳನ್ನು ಕಳಿಸಿಕೊಟ್ಟಾಗ ನಾವು ತುಂಬಾ ಸಂತೋಷಪಡುತ್ತೇವೆ. ಡಾ. ಉಜ್ವಲ್ ಯು.ಜೆ.ಯವರು ವಿಟಿಯು ಇ.ಸಿ. ಮೆಂಬರ್ ಆದ ಮೇಲೆ ವಿಟಿಯು, ಇತರ ಇಂಜಿನಿಯರಿಂಗ್ ಕಾಲೇಜುಗಳು ಮತ್ತು ನಮ್ಮ ಸಂಬಂಧ ವೃದ್ಧಿಸಿದೆ. ಮುಂದಿನ ದಿನಗಳಲ್ಲಿ ಡಾ. ಕೆ.ಎನ್. ಸುಬ್ರಹ್ಮಣ್ಯರ ಮಾರ್ಗದರ್ಶನದಲ್ಲಿ ಎನ್.ಎಸ್.ಎಸ್. ಅಳವಡಿಸಿಕೊಳ್ಳುತ್ತೇವೆಎಂದರು.

ಎ.ಒ.ಎಲ್.ಇ ಕಮಿಟಿ ಬಿ ಕಾರ್ಯದರ್ಶಿ ಡಾ. ಜ್ಯೋತಿ ಆರ್ ಪ್ರಸಾದ್ ಕಾಲೇಜಿನ ಮ್ಯಾಗಜಿನ್ ಬಿಡುಗಡೆ ಮಾಡಿದರು. ಕೆವಿಜಿ ಡೆಂಟಲ್ ಕಾಲೇಜಿನ ಗವರ್ನಿಂಗ್ ಕೌನ್ಸಿಲ್ ಮೆಂಬರ್ ಮೌರ್ಯ ಆರ್. ಕುರುಂಜಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ವೇದಿಕೆಯಲ್ಲಿದ್ದ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಸಿಇಒ ಹಾಗೂ ವಿಟಿಯು ಬೆಳಗಾವಿಯ ಎಕ್ಸಿಕ್ಯುಟಿವ್ ಕೌನ್ಸಿಲ್ ಮೆಂಬರ್ ಡಾ. ಉಜ್ವಲ್ ಯು.ಜೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸುತ್ತಾ ‘ಇವತ್ತು ನೀವು ಇಂಜಿನಿಯರ್ಸ್ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದೀರಿ. ಜನ್ಮಕೊಟ್ಟು ವಿದ್ಯಾಭ್ಯಾಸ ನೀಡಿದ ತಂದೆ ತಾಯಿ, ಪೋಷಕರು, ವಿದ್ಯೆ ಕಲಿಸಿದ ಗುರುಗಳು ಮತ್ತು ಹಿರಿಯರನ್ನು ಗೌರವಿಸಿ. ಆಗ ಸಮಾಜ ನಿಮ್ಮನ್ನು ಗೌರವಿಸುತ್ತದೆ’ ಎಂದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ್ ವಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿಭಾಗ ಮುಖ್ಯಸ್ಥೆ ಹಾಗೂ ಕಾಲೇಜು ಮ್ಯಾಗಜಿನ್ ನ ಪ್ರಧಾ‌ನ ಸಂಪಾದಕರಾದ ಡಾ. ಸವಿತಾ ಸಿ.ಕೆ ಸಂಪಾದಕೀಯ ನುಡಿಗಳನ್ನಾಡಿದರು. ಡೀನ್ ಅಕಾಡೆಮಿಕ್ ಮತ್ತು ಪ್ರೊಫೆಸರ್ ಡಾ. ಪ್ರಜ್ಞಾ ಎಂ.ಆರ್ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿ, ಕೆವಿಜಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳನ್ನು ವೇದಿಕೆಗೆ ಆಹ್ವಾನಿಸಿದರು.

ಡಾ. ರೇಣುಕಾಪ್ರಸಾದ್ ಕೆ.ವಿ. ಚಿನ್ನದ ಪದಕ ನೀಡಿ ಅಭಿನಂದಿಸಿದರು. ವಿಭಾಗ ಮುಖ್ಯಸ್ಥರುಗಳಾದ ಡಾ. ಚಂದ್ರಶೇಖರ್, ಡಾ. ಕುಸುಮಾಧರ್, ಡಾ. ಕೃಷ್ಣಾನಂದ ಮತ್ತು ಪ್ರೊ. ರಾಮಚಂದ್ರ ಕಾಮತ್ ಪದವಿ ಪಡೆದ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ವೇದಿಕೆಯಲ್ಲಿದ್ದ ಕಾಲೇಜಿನ ಉಪ ಪ್ರಾಂಶುಪಾಲರೂ, ವಿಭಾಗ ಮುಖ್ಯಸ್ಥರೂ ಆಗಿರುವ ಡಾ. ಶ್ರೀಧರ್ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿ ಕೊನೆಯಲ್ಲಿ ವಂದಿಸಿದರು. ಪ್ರೊ. ಕೃಷ್ಣರಾಜ್ ಮತ್ತು ತಂಡದವರು ಪ್ರಾರ್ಥಿಸಿ, ಕೊನೆಯಲ್ಲಿ ರಾಷ್ಟ್ರಗೀತೆ ಹಾಡಿದರು.

ಪ್ರೊ. ಭವ್ಯ ಮತ್ತು ಪ್ರೊ. ಅಶ್ವಿಜ ಸಿ.ಕೆ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಉಪನ್ಯಾಸಕ ವೃಂದ, ಕಾಲೇಜಿನ ಆಡಳಿತಾಧಿಕಾರಿ ನಾಗೇಶ್ ಕೊಚ್ವಿ ಮತ್ತು ಸಿಬ್ಬಂದಿಗಳು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.

ಸಮಯ ತುಂಬಾ ಪ್ರಾಮುಖ್ಯವಾದದ್ದು. ಅವಕಾಶಗಳು ಯಾವಾಗಲೂ ಬರುವುದಿಲ್ಲ. ಬಂದಾಗ ಅದನ್ನು ಸದುಪಯೋಗಪಡಿಸಿಕೊಳ್ಳುವ ಜಾಣ್ಮೆಯನ್ನು ಬೆಳೆಸಿಕೊಳ್ಳಿ. ಅದಕ್ಕೆ ಉತ್ತಮ ಉದಾಹರಣೆ ಡಾ. ಕುರುಂಜಿ ವೆಂಕಟ್ರಮಣ ಗೌಡರು. ಅವಕಾಶ ಬಂದಾಗ ಒಂದರ ಮೇಲೊಂದು ವಿದ್ಯಾಸಂಸ್ಥೆಗಳನ್ನು ಸ್ಥಾಪಿಸುತ್ತಾ ಹೋದರು‌. ಅವರು ಹಣದ ಹಿಂದೆ ಹೋದವರಲ್ಲ‌ – ಮೌರ್ಯ ಆರ್ ಕುರುಂಜಿ