ಜನಪ್ರತಿನಿಧಿಗಳು ಪರಿಹಾರ ನೀಡುವಿರಾ?
ಮಂಡೆಕೋಲು ಗ್ರಾಮದ ಪೇರಾಲಿನಿಂದ ಮೈತಡ್ಕಕ್ಕೆ ಹೋಗುವ ರಸ್ತೆ ಯಾವಟೆ ಬಸ್ ನಿಲ್ದಾಣ ಬಳಿಯಿಂದ ಮೈತಡ್ಕದವರೆಗಿನ ರಸ್ತೆ ತೀರಾ ದುಸ್ತರವಾಗಿದ್ದು, ಜನರು ಸಂಚಾರಕ್ಕೆ ಕಷ್ಟ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.








ಈ ಭಾಗದಿಂದ ಪ್ರತೀನಿತ್ಯ ವಿವಿಧ ವಿದ್ಯಾಸಂಸ್ಥೆಗಳಿಗೆ ವಿದ್ಯಾರ್ಥಿಗಳು, ಕೆಲಸಕ್ಕೆ ಸಾರ್ವಜನಿಕರು ಹೋಗುತಿದ್ದು ರಸ್ತೆ ಸಮಸ್ಯೆಯಿಂದ ಸಮಸ್ಯೆ ಎದುರಿಸುತ್ತಿದ್ದಾರೆ.
ವಿದ್ಯಾರ್ಥಿಗಳಿಗೆ ಆಯಾ ವಿದ್ಯಾಸಂಸ್ಥೆಯ ಬಸ್ ಇದೆಯಾದರೂ ರಸ್ತೆ ಸಮಸ್ಯೆಯಿಂದಾಗಿ ಬಸ್ ಗಳು ಆ ರಸ್ತೆಯಲ್ಲಿ ಬರುತ್ತಿಲ್ಲ. ರಸ್ತೆ ಹಾಳಾಗಿರುವಲ್ಲಿಂದ ಎರಡು ಕಿ.ಮೀ ದೂರದಲ್ಲಿ ಬಸ್ ನಿಲ್ಲುತ್ತಿದ್ದು ಮಕ್ಕಳು ನಡೆದುಕೊಂಡೇ ಹೋಗಬೇಕಾಗಿದೆ.
ಇಲ್ಲಿಯ ಗ್ರಾಮ ಪಂಚಾಯತ್ ಆಗಲೀ, ಶಾಸಕರು, ಸಂಸದರು ಈ ರಸ್ತೆಯಲ್ಲಿ ಯೋಗ್ಯವನ್ನಾಗಿಸಬೇಕು.ಜನರ ಕಷ್ಟಗಳಿಗೆ ಸ್ಪಂದಿಸಬೇಕೆಂದು ಜನರು ಮನವಿ ಮಾಡುತಿದ್ದಾರೆ.
“ಇದು ಪೇರಾಲಿನಿಂದ ಮೈತಡ್ಕವರೆಗಿನ ಮುಖ್ಯ ರಸ್ತೆ. ಯಾವಟೆ ಬದ್ ನಿಲ್ದಾಣದಿಂದ ತುಂಬಾ ಹಾಳಾಗಿದೆ. ಶಾಲಾ ಬಸ್ ಬರುತಿತ್ತು. ಆದರೆ ಈಗ ರಸ್ತೆ ಸಮಸ್ಯೆ ಯಿಂದ ಬರುತ್ತಿಲ್ಲ. ನಮ್ಮಿಂದ ಮತ ಪಡೆದು ಗೆದ್ದಿರುವ ಗ್ರಾ.ಪಂ., ಶಾಸಕರು, ಸಂಸದರು ಈ ರಸ್ತೆಯನ್ನು ಯೋಗ್ಯವನ್ನಾಗಿಸಬೇಕು” ಎಂದು ಮೈತಡ್ಕ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷರಾದ ಮಹೇಶ್ ಕಾಡುಸೊಂರಂಜ ಹೇಳುತ್ತಾರೆ.










