ಆಲೆಟ್ಟಿ ಸದಾಶಿವ ದೇವಳದಲ್ಲಿ ಪ್ರತಿಷ್ಠಾ ವಾರ್ಷಿಕ ಮಹೋತ್ಸವ

0

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕ ಮಹೋತ್ಸವ ವು ಜೂ.5 ರಂದು ಜರುಗಿತು. ಪ್ರಧಾನ ಅರ್ಚಕ ಹರ್ಷಿತ್ ಬನ್ನಿಂತಾಯ ರವರ ನೇತೃತ್ವದಲ್ಲಿ
ಬೆಳಗ್ಗೆ ನಿತ್ಯ ಪೂಜೆಯಾಗಿ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ಕ್ಷೇತ್ರದ ರವೀಶ ತಂತ್ರಿಯವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮವು ನಡೆಯಿತು.


ಗಣಪತಿ ಹವನವಾಗಿ ಏಕದಶಾರುದ್ರಾಭಿಷೇಕವಾಗಿ ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಯಿತು.
ಈ ಸಂದರ್ಭದಲ್ಲಿ ಭಾರದ್ವಾಜಾಶ್ರಮದ ವೇದಪಾಠ ಶಾಲೆಯವರಿಂದ ವೇದ ಪಾರಾಯಣ ನಡೆಯಿತು. ಆಗಮಿಸಿದ ಎಲ್ಲರಿಗೂ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಮೊಕ್ತೇಸರ ರಾದ ಹೇಮಚಂದ್ರ ಬೈಪಡಿತ್ತಾಯ,ಶ್ರೀಪತಿ ಬೈಪಡಿತ್ತಾಯ, ‌ವ್ಯ.ಸ.ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ, ಸೇವಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಕೋಲ್ಚಾರು ಹಾಗೂ ಸಮಿತಿ ಸರ್ವ ಸದಸ್ಯರು ಉಪಸ್ಥಿತರಿದ್ದರು.