
ಅಜ್ಜಾವರ ಗ್ರಾಮದ ಕಾಂತಮಂಗಲದಲ್ಲಿ ಸಂದೀಪ್ ಕೆ.ವೈ ಯವರ ಮಾಲಕತ್ವದ ಆರ್.ಆರ್.ಅಟೊಮೋಟಿವ್ಸ್ ಕಾರ್ ಸರ್ವಿಸ್ ಸೆಂಟರ್ ಜೂ.5 ರಂದು ಶುಭಾರಂಭಗೊಂಡಿತು.








ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಿರೀಶ್ ಭಾರದ್ವಾಜ್ ರವರು ಸಂಸ್ಥೆಯನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಎ.ಒ.ಎಲ್.ಇ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ರವರು ಆಗಮಿಸಿ ಶುಭ ಹಾರೈಸಿದರು.
ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಹಿರಿಯ ಉದ್ಯಮಿ ಲಯನ್ ವಿಶ್ವನಾಥ ರಾವ್, ನಿವೃತ್ತ ಪ್ರಾಂಶುಪಾಲರು,ಸಾಹಿತಿ ಡಾ.ಪ್ರಭಾಕರ ಶಿಶಿಲ,
ಸುಳ್ಯ ಸಿ.ಎ.ಬ್ಯಾಂಕ್ ಅಧ್ಯಕ್ಷ ವಿಕ್ರಮ್ ಅಡ್ಪಂಗಾಯ, ಜನತಾ ಗ್ರೂಪ್ಸ್ ಮಾಲಕ ಉದ್ಯಮಿ ರೊ.ಅಬ್ದುಲ್ ಹಮೀದ್, ಉದ್ಯಮಿ ಲಯನ್ ವಿನೋದ್ ಲಸ್ರಾದೊ, ಹಿರಿಯರಾದ ಯಾದವ್ ಜಿ ರಾವ್, ಆನಂದ ರಾವ್, ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಮಲ್ಲೇಶ್ ಬೆಟ್ಟಂಪಾಡಿ, ತಾಲೂಕು ಟೂರಿಸ್ಟ್ ಕಾರು ಚಾಲಕ ಮಾಲಕರ ಸಂಘದ ಅಧ್ಯಕ್ಷ ಜಯಂತ್ ಹರ್ಲಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆಗಮಿಸಿದ ಎಲ್ಲರನ್ನೂ ಶ್ರೀಮತಿ ಪೂರ್ಣಿಮಾ, ಸಂದೀಪ್ ರಾವ್, ಪ್ರದೀಪ್ ರಾವ್, ಆರಾಧ್ಯ ರಾವ್, ಜಗದೀಶ್ ರಾವ್ ಸ್ವಾಗತಿಸಿದರು. ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ನೂತನವಾಗಿ ಪ್ರಾರಂಭಗೊಂಡ ಸಂಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಎಲ್ಲಾ ರೀತಿಯ ದುರಸ್ತಿ ಕೆಲಸಮಾಡಿಕೊಡಲಾಗುವುದು. ಎಲ್ಲಾ ತರದ ವಾಹನಗಳ ಮೆಕ್ಯಾನಿಕಲ್ ವರ್ಕ್, ಟಿಂಟಿಂಗ್ ಕೆಲಸ, ಪೈಂಟಿಂಗ್ ಹಾಗೂ (ಸರ್ವಿಸ್) ವಾಶ್ ನುರಿತ ಕೆಲಸಗಾರರಿಂದ ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದು ಎಂದು ಮಾಲಕರು ತಿಳಿಸಿದರು.










