








ಸುಳ್ಯದಲ್ಲಿ ಪ್ರಧಾನ ಕಚೇರಿ ಹೊಂದಿರುವ
ಲ್ಯಾಂಪ್ ಸೊಸೈಟಿಯ ಬಡ್ಡಡ್ಕ ಶಾಖಾ ಮಾರಾಟ ಸಹಾಯಕ ಶಶಿಧರ ನಾಯ್ಕರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಜೂ. 6ರಂದು ಸುಳ್ಯ ಪ್ರಧಾನ ಕಚೇರಿಯಲ್ಲಿ ನಡೆಯಿತು. ಸಂಘದ ಅಧ್ಯಕ್ಷೆ ಶ್ರೀಮತಿ ನೀಲಮ್ಮ ಕಣಿಪ್ಪಿಲರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷ ಶಿವರಾಮ ನಾಯ್ಕ ಕಾಪುಮಲೆ ಅತಿಥಿಯಾಗಿ ಭಾಗವಹಿಸಿದ್ದರು. ಸಂಘದ ಉಪಾಧ್ಯಕ್ಷ ಪುಂಡರೀಕ ಕಾಪುಮಲೆ, ಶ್ರೀಮತಿ ಮೀನಾಕ್ಷಿ ಶಶಿಧರ ನಾಯ್ಕ್ ಬಡ್ಡಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೇದಿಕೆಯಲ್ಲಿದ್ದ ಗಣ್ಯರು ನಿವೃತ್ತರನ್ನು ಸನ್ಮಾನಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಿಬ್ಬಂದಿ ಸಂದೀಪ್ ಕುಮಾರ್ ಸನ್ಮಾನಪತ್ರ ವಾಚಿಸಿದರು. ಸಂಘದ ನಿರ್ದೇಶಕರಾದ ಐತ್ತಪ್ಪ ಎನ್, ಮಿಥುನ್ ಶಾಂತಿನಗರ, ಕು. ಜ್ಯೋತಿಕಾ ಗುತ್ತಿಗಾರು, ಕು. ಮೋಕ್ಷಿತಾ ನೆಲ್ಲೂರು ಕೆಮ್ರಾಜೆ, ಸರಕಾರದ ಪ್ರತಿನಿಧಿ ಭವಾನಿಶಂಕರ ಕಲ್ಮಡ್ಕ, ಸಂಸ್ಥೆಯ ಸಿಬ್ಬಂದಿಗಳಾದ ಶ್ರೀಮತಿ ವಾರಿಜ ಸಿ.ಹೆಚ್, ಭವ್ಯ ಕೆ.ಎಸ್, ನಿತ್ಯನಿಧಿ ಸಂಗ್ರಾಹಕಿ ಕು. ಲತಾಶ್ರೀ, ಶಶಿಧರ ನಾಯ್ಕರ ಪುತ್ರ ರಂಜಿತ್ ಬಿ.ಎಸ್ ಮತ್ತು ಪ್ರಕಾಶ್ ಸಂದರ್ಭದಲ್ಲಿ ಉಪಸ್ಥಿತರಿದ್ದರು.










