ಸುಳ್ಯದಲ್ಲಿ ನ್ಯೂ ಡಾಟ್ ಡ್ರೆಸ್ ಮಾರ್ಟ್ ಶುಭಾರಂಭ

0

ಪ್ರಾರಂಭೋತ್ಸವದ ಪ್ರಯುಕ್ತ ಪ್ಯಾಂಟ್ ಮತ್ತು ಶರ್ಟ್‌ಗೆ ಕೇವಲ ರೂ. 649

ಸುಳ್ಯದ ಮುಖ್ಯರಸ್ತೆ ಶ್ರೀರಾಂಪೇಟೆಯಲ್ಲಿರುವ ಕೊಯಿಂಗೋಡಿ ಕಾಂಪ್ಲೆಕ್ಸ್‌ಲ್ಲಿ ಮುಳಿಯ ಜ್ಯುವೆಲ್ಲರ್ಸ್‌ನ ಮೇಲ್ಗಡೆ ಶರತ್ ಹೆಚ್.ರವರ ಮಾಲಕತ್ವದಲ್ಲಿ ಪುರುಷರ ವಸ್ತ್ರಮಳಿಗೆ ನ್ಯೂ ಡಾಟ್ ಡ್ರೆಸ್ ಮಾರ್ಟ್ ಜೂ.೬ ರಂದು ಶುಭಾರಂಭಗೊಂಡಿತು.


ಮಳಿಗೆಯನ್ನು ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ. ನೀರಬಿದರೆ ಉದ್ಘಾಟಿಸಿದರು.
ಕೊಯಿಂಗೋಡಿ ಕಾಂಪ್ಲೆಕ್ಸ್ ಮಾಲಕ ದಯಾನಂದ ಕೊಯಿಂಗೊಡಿ ದೀಪ ಪ್ರಜ್ವಲನೆ ಮಾಡಿದರು.
ವರ್ತಕರ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ ರೈ, ಮುಳಿಯ ಜ್ಯುವೆಲರ್ಸ್ ಮಾಲಕ ಎಂ. ಗೋವಿಂದ ಭಟ್, ಗೋಪಾಲ್ ಸ್ಟುಡಿಯೋ ಮಾಲಕ ಕೆ. ಎಸ್. ಗೋಪಾಲಕೃಷ್ಣ, ಪೋಟೋಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷ ಶಶಿ ಕೊಯಿಂಗೋಡಿ, ರೋಹಿತ್ ಕೊಯಿಂಗೋಡಿ, ಆಶೋಕ್ ಕೊಯಿಂಗೋಡಿ, ಎಂ. ಎಸ್. ಪ್ರಸಾದ್ ಇಂಜಿನಿಯರ್, ಕುರುಂಜಿಕಾರ್ಸ್‌ನ ಲಿಂಗಪ್ಪ ಗೌಡ, ಚೇತನ್ ಪುತ್ತೂರು, ವಿರಪ್ಪ ಹೆಚ್ ಕೆ,ನಟರಾಜ್ ವಿ.ಕೆ, ಸಚಿನ್, ಬಸವರಾಜ್, ಪ್ರಕಾಶ್, ಶಂಭು, ಬಸಂತಪ್ಪ, ದರ್ಶನ್, ಪವಿತ್ರ ಮೊದಲಾದವರು ಉಪಸ್ಥಿತರಿದ್ದರು.
ವಿಜೆ ವಿಖ್ಯಾತ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಣೆ ಮಾಡಿದರು.


ಸಂಸ್ಥೆ ಪ್ರಾರಂಭದ ಪ್ರಯುಕ್ತ ರಿಯಾಯಿತಿ ದರದಲ್ಲಿ ಬಟ್ಟೆಬರೆಗಳು ದೊರೆಯುತ್ತದೆ.


ಒಂದು ಪ್ಯಾಂಟ್ ಮತ್ತು ಒಂದು ಶರ್ಟ್ ಗೆ ಕೇವಲ ೬೪೯ಕ್ಕೆ, ೫ ಸ್ಲೀವ್ಸ್ ೨೬೦ ಜಿಎಸ್‌ಎಂ ಟೀಶರ್ಟ್ ಮೂರಕ್ಕೆ ೯೯೯ ರೂ ಅಲ್ಲದೇ ಅನೇಕ ರೀತಿಯ ಕೊಡುಗೆಗಳು ಮಳಿಗೆಯಲ್ಲಿ ದೊರೆಯುತ್ತದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.