ಮೆಸ್ಕಾಂ ವತಿಯಿಂದ ಮರಗಳ ರೆಂಬೆ ತೆರವು ವೇಳೆ ನಡೆದ ಕಾರ್ಯ

ಸುಳ್ಯ ನಗರ ಭಾಗದಲ್ಲಿ ವಿದ್ಯುತ್ ತಂತಿಗಳ ಮೇಲೆ ತಾಗುತ್ತಿರುವ ಮರದ ರೆಂಬೆ ಮತ್ತು ಕಾಡು ಬಳ್ಳಿ ಗಿಡಗಳನ್ನು ತೆರವುಗೊಳಿಸುವ ಕಾರ್ಯ ಜೂನ್ ೫ ರಂದು ನಡೆದಿತ್ತು.
ಇದರ ಅಂಗವಾಗಿ ಸುಳ್ಳದ ಬೀರಮಂಗಲ, ಜೂನಿಯರ್ ಕಾಲೇಜ್ ರಸ್ತೆ, ಓಡಬಾಯಿ, ಜಯನಗರ, ಕುದ್ಪಾಜೆ, ನಾರಾಜೆ ಮೊದಲಾದ ಕಡೆಗಳಲ್ಲಿ ತೆರವು ಕಾರ್ಯಗಳು ನಡೆದಿದೆ.









ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಾಡಿನೆಲ್ಲಡೆ ಗಿಡಗಳನ್ನು ನೆಡುವ ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ಜಯನಗರ ಪರಿಸರದಲ್ಲಿ ಮಿಲಿಟರಿ ಕ್ವಾರ್ಟರ್ಸ್ ಬಳಿ ನೆರಳಿಗೆ ನೆಟ್ಟ ಮರವನ್ನು ಬುಡದಿಂದಲೇ ತುಂಡರಿಸಿ ಹಾಕಿರುವ ಘಟನೆ ನಡೆದಿದೆ. ಕಳೆದ ಏಳೆಂಟು ವರ್ಷ ಮೊದಲು ಪರಿಸರ ದಿನದಂದು ನೆಟ್ಟ ಗಿಡ ಇಂದು ಮರವಾಗಿ ಬೆಳೆದಿದ್ದು ಅದರ ಪಕ್ಕದಲ್ಲಿ ವಿದ್ಯುತ್ ತಂತಿ ಹಾದು ಹೋಗುತ್ತಿದ್ದನ್ನು ಗಮನಿಸಿದ ಮೆಸ್ಕಾ ಇಲಾಖೆ ಮರದ ರೆಂಬೆಗಳನ್ನು ಕತ್ತರಿಸಿ ಮರವನ್ನು ಉಳಿಸುವುದು ಬಿಟ್ಟು ಇಡೀ ಮರವನ್ನೇ ಕತ್ತರಿಸಿ ಹಾಕಿರುವುದು ಕಂಡು ಬಂದಿದೆ.
ಈ ಒಂದು ಕಾರ್ಯದಿಂದ ಬೇಸರ ವ್ಯಕ್ತಪಡಿಸಿದ ಸ್ಥಳೀಯ ನಿವಾಸಿಗಳು ವಿಶ್ವ ಪರಿಸರ ದಿನದಂ ದೇ ಈ ರೀತಿಯ ಘಟನೆ ಮಾಡಿರುವುದು ಸರಿಯಲ್ಲ ಎಂದು ನೋವನ್ನು ಹಂಚಿಕೊಂಡಿದ್ದಾರೆ.











