ಎಲಿಮಲೆ: ಕೆ. ವಿ. ಜಿ ದಂತ ಮಹಾವಿದ್ಯಾಲಯ ಮತ್ತು ಅಸ್ಪತ್ರೆಯ ವತಿಯಿಂದ ದೇವಚಳ್ಳ ಶಾಲೆಯಲ್ಲಿ ರಾಷ್ಟ್ರೀಯ ಯೋಜನಾ ಶಿಬಿರ

0

ಕೆವಿಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಇದರ ರಾಷ್ಟ್ರೀಯ ಸೇವಾ ಯೋಜನೆ ಘಟಕ ಇದರ ಸಹಭಾಗಿತ್ವದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವಚಳ್ಳ ಇಲ್ಲಿ ಜೂ. 4ರಂದು ವಿವಿಧ ಹಣ್ಣಿನ ಗಿಡ ನೆಡುವುದು, ಶಾಲಾ ಪರಿಸರ ಸ್ವಚ್ಛತೆ, ರಕ್ತದ ಗುಂಪಿನ ವರ್ಗೀಕರಣ, ಆರೋಗ್ಯ ಮಾಹಿತಿ ಕಾರ್ಯಗಾರ ನಡೆಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷರಾದ ಜಯಾನಂದ ಪಟ್ಟೆ ವಹಿಸಿದ್ದರು. ಶಾಲಾ ಮುಖ್ಯಗುರುಗಳಾದ ಶ್ರೀಧರ ಗೌಡ ಕೆ. ಸ್ವಾಗತಿಸಿದರು.

ಕೆವಿಜಿ ದಂತ ಮಹಾವಿದ್ಯಾಲಯದ ಡಾ. ಮನೋಜ್ ಅಂಡ್ಡತಡ್ಕ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ಕೆ ವಿ ಜಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾದ ಜಯಂತ್ ತಳೂರು ಪ್ರಾಸ್ತಾವಿಕ ಮಾತಾಡಿದರು.

ವೇದಿಕೆಯಲ್ಲಿ ಡಾ.ಆಲ್ವಿನ್ ಆಂಟನಿ, ಡಾ. ಸುಮನ್, ಡಾ. ರೋಹಿತ ಹಾಗೂ ಉಪಸ್ಥಿತರಿದ್ದರು.

ಅತಿಥಿ ಶಿಕ್ಷಕರಾದ ಜೀವನ್ ಕುಮಾರ್ ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಅರೋಗ್ಯ ಮಾಹಿತಿ ಕಾರ್ಯಕ್ರಮದ ವೇದಿಕೆಯಲ್ಲಿ ಶೈಲೇಶ್ ಅಂಬೆಕಲ್ಲು ಗ್ರಾಮ ಪಂಚಾಯತ್ ಅಧ್ಯಕ್ಷರು ದೇವಚಳ್ಳ ಉಪಸ್ಥಿತರಿದ್ದರು. ಕೆವಿಜಿ ದಂತ ಮಹಾ ವಿದ್ಯಾಲಯದ ವೈದ್ಯರುಗಳು, ಶಾಲಾ ಶಿಕ್ಷಕವೃಂದ, ಎಸ್ ಡಿ ಎಂ ಸಿ ಸದಸ್ಯರು,ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ವಿವಿಧ ಬಗೆಯ ಹಣ್ಣಿನ ಗಿಡಗಳನ್ನು ಇಕೋ ಕ್ಲಬ್ ನ ಸಹಯೋಗದೊಂದಿಗೆ ನೆಡಲಾಯಿತು. ನಂತರ ಶಾಲಾ ಪರಿಸರ ಸ್ವಚ್ಛತೆ, ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ, ರಕ್ತದ ಗುಂಪಿನ ವರ್ಗೀಕರಣ, ಆರೋಗ್ಯ ಮಾಹಿತಿ ಮುಂತಾದ ಕಾರ್ಯಕ್ರಮಗಳು ನೆರವೇರಿದವು.