ಕುಂಬರ್ಚೋಡು ಮೊಹಿಯದ್ದೀನ್ ಜುಮ್ಮಾ ಮಸೀದಿಯಲ್ಲಿ ಬಕ್ರೀದ್ ಹಬ್ಬ ಆಚರಿಸಲಾಯಿತು.
ಮಸೀದಿಯ ಖತಿಬರಾದ ಇಕ್ಬಾಲ್ ಇರ್ಫಾನಿ ಯವರು ಖುತುಬಾ ನೆರವೇರಿಸಿ ಮಾತನಾಡಿ ಸರಳತೆ, ತ್ಯಾಗ
ತಾಳ್ಮೆಗ ಳೆಂಬ ಅರ್ಥಪೂರ್ಣ ಬದುಕಿನ ಅನಿರ್ವಾಯ ಗುಣಗಳ ಮೂಲಕ ಸಮಾಜದ ಕನಸನ್ನು ಬೆಸೆಯುವ ವೈಚಾರಿಕತೆಯ ಮಹಾ ಘೋಷಣೆಯ ಸ್ಮರಣೆಯೇ ಬಕ್ರೀದ್ ಎಂದು ನುಡಿದರು.








ಪರಸ್ಪರ ಶಾಂತಿ ಸೌಹಾರ್ದದಿಂದ ನಾವು ಬದುಕಿ ಬಾಳಬೇಕು. ಈ ಜಗತ್ತಿನಲ್ಲಿ ಶಾಂತಿ ನೆಲೆಸಬೇಕು ಎಂದು ಬಕ್ರೀದ್ ಹಬ್ಬದ ಸಂದೇಶವನ್ನು ನೀಡಿದರು.
ಈ ಸಂದರ್ಭದಲ್ಲಿ ಮಸೀದಿಯ ಅಧ್ಯಕ್ಷರಾದ ಮಹಮ್ಮದ್ ಆಲಿ ಪೆರಾಜೆ, ಉಪಾಧ್ಯಕ್ಷರಾದ ಅಬ್ದುಲ್ ಕರೀಂ ಬಿ ಎಂ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಅಕ್ಕರೆ, ಹನೀಫ್ ಹಾಜಿ ಕೆ ಎಂ, ಮಹಮ್ಮದ್ ಮುಸ್ಲಿಯಾರ್ ಎಲಿಮಲೆ ಹಾಗೂ ಜಮಾಅತಿನ ಎಲ್ಲಾ ಸದಸ್ಯರು ಪಾಲ್ಗೊಂಡರು.










