ಶಾಂತಿನಗರ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

0

ಮೈಭಾರತ್ ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದೀಪಾಂಜಲಿ ಮಹಿಳಾ ಮಂಡಲ ಶಾಂತಿನಗರ ಇವರ ಜಂಟಿ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಜೂ. ೫ರಂದು ಶಾಂತಿನಗರ ಶಾಲಾ ರಂಗಮಂದಿರದಲ್ಲಿ ಆಚರಿಸಲಾಯಿತು. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಪವಿತ್ರ ಅಧ್ಯಕ್ಷತೆ ವಹಿಸಿದ್ದರು.

ದೈ.ಶಿ..ಶಿಕ್ಷಕ ರಘುನಾಥ ಶೆಟ್ಟಿ, ಶಿಕ್ಷಕಿ ಪಾರ್ವತಿ ಹಾಗೂ ಅಧ್ಯಾಪಕ ವೃಂದ ವೇಂದಿಕೆಯಲ್ಲಿ ಉಪಸ್ಥಿತರಿದ್ದರು. ದೀಪಾಂಜಲಿ ಮಹಿಳಾ ಮಂಡಲದ ಸ್ತಾಪಕಾಧ್ಯಕ್ಷೆ ಶ್ರೀಮತಿ ಹರ್ಷ ಕರುಣಾಕರ ಸೇರ್ಕಜೆ, ಅಧ್ಯಕ್ಷೆ ಲಲಿತಾ ಎಂ., ಕಾರ್ಯದರ್ಶಿ ಬಿಂದು ಚಂದ್ರನ್ ಹಾಗೂ ಮಹಿಳಾ ಮಂಡಲದ ಸದಸ್ಯರು ಉಪಸ್ಥಿತರಿದ್ದರು.


ಶಾಲಾ ಮುಖ್ಯಶಿಕ್ಷಕಿ ಪ್ರಾಸ್ತಾವಿಕ ಮಾತನಾಡಿದರು. ಹರ್ಷ ಕರುಣಾಕರರವರು ವಿಶ್ವ ಪರಿಸರ ದಿನದ ಬಗ್ಗೆ ಮಾಹಿತಿ ನೀಡಿದರು. ಶಾಲಾ ವಿದ್ಯಾರ್ಥಿ ಕು. ತೃಪ್ತಿ ಕಾರ್ಯಕ್ರಮ ನಿರೂಪಿಸಿದರು. ಕು. ಸಫ್ರಿನಾ ಸ್ವಾಗತಿಸಿದರು. ಮಕ್ಕಳಿಗೆ ನೆಲ್ಲಿಕಾಯಿ ಗಿಡ, ಅಶೋಕ ಹೂವಿನ ಗಿಡ, ಹಾಗೂ ಜಂಬು ನೇರಳೆ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು. ಶಾಲಾ ಮಕ್ಕಳು ಪರಿಸರದ ಬಗ್ಗೆ ಭಾಷಣ ಮಾಡಿದರು.