ಆಸ್ಪತ್ರೆಯಲ್ಲಿ ಕಿಕ್ಕಿರಿದು ತುಂಬಿರುವ ಹೊರ ರೋಗಿಗಳು
ಸ್ವಚ್ಛತೆ ಸಹಿತ ಸೇವೆ ಮುಂದುವರಿಸಿರುವ ಸುಳ್ಯ ಅಂಬ್ಯುಲೆನ್ಸ್ ಚಾಲಕ ಸಂಘ
ಸುಳ್ಯ ಸರ್ಕಾರಿ ಆಸ್ಪತ್ರೆಯ ಡಿ ದರ್ಜೆ ನೌಕರರಿಗೆ ಕಳೆದ ಮೂರು ತಿಂಗಳಿನಿಂದ ಸಂಬಳ ಬಾರದೆ ಸಮಸ್ಯೆಯಾಗಿದ್ದು ಈ ಹಿನ್ನೆಲೆಯಲ್ಲಿ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗದೆ ನಡೆಸುತ್ತಿರುವ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದೆ.

ಈ ನಡುವೆ ಆಸ್ಪತ್ರೆಯಲ್ಲಿ ಇಂದು ಹೊರ ರೋಗಿಗಳ ಹೆಚ್ಚಿನ ಸಂಖ್ಯೆಯಲ್ಲಿದ್ದು ಸರತಿ ಸಾಲು ಕಂಡು ಬರುತ್ತಿದೆ. ಅಲ್ಲದೆ ತುರ್ತು ವಿಭಾಗಕ್ಕೆ ಬರುತ್ತಿರುವ ರೋಗಿಗಳ ಸಂಖ್ಯೆಯೂ ಹೆಚ್ಚಿದೆ.
ಸುಮಾರು 20 ಮಂದಿ ಡಿ ದರ್ಜೆ ನೌಕರರು ಬೇರೆ ಬೇರೆ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದು ಅವರೆಲ್ಲ ಮುಷ್ಕರ ನಿರತರಾಗಿದ್ದಾರೆ. ರೋಗಿಗಳಿಗೆ ಸಮಸ್ಯೆ ಆಗಬಾರದೆಂಬ ನಿಟ್ಟಿನಲ್ಲಿ ನಿನ್ನೆಯಿಂದ ಸುಳ್ಯ ತಾಲೂಕು ಆಂಬುಲೆನ್ಸ್ ಚಾಲಕ ಸಂಘದ ಸುಮಾರು 25 ಕ್ಕೂ ಹೆಚ್ಚು ಸದಸ್ಯರು ಸೇವೆಯನ್ನು ನೀಡುತಿದ್ದು ಇವರ ಸೇವೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರ ವಾಗಿದೆ.









ನಿನ್ನೆ ಯಿಂದಲೇ ಆಸ್ಪತ್ರೆ ಯಲ್ಲಿ ರುವ ಸಂಘದ ಸದಸ್ಯರುಗಳು ಬೇರೆ ಬೇರೆ ಗ್ರೂಪ್ ಗಳನ್ನು ಮಾಡಿ ತಮ್ಮ ಸೇವೆಯನ್ನು ನೀಡುತ್ತಿದ್ದು ಇದು ಇಲ್ಲಿಗೆ ಬರುವ ರೋಗಿಗಳಿಗೂ, ವೈದ್ಯರುಗಳಿಗೂ, ಇತರ ಸಿಬ್ಬಂದಿಗಳಿಗೂ ಅನುಕೂಲ ವಾಗಿದೆ.
ಇಂದು ಸಂಜೆ ಯವರೆಗೆ ಕಾದು ಡಿ ದರ್ಜೆ ನೌಕರರಿಗೆ ನ್ಯಾಯ ಸಿಗದೇ ಹೋದರೆ ಅವರ ಪರವಾಗಿ ತೀವ್ರ ಹೋರಾಟಕ್ಕೆ ನಾವು ಸಿದ್ದರಾಗಲಿದ್ದೇವೆ ಎಂದು ಅಂಬ್ಯುಲೆನ್ಸ್ ಚಾಲಕ ಸಂಘ ದ ಸದಸ್ಯರು ಸುದ್ದಿಗೆ ತಿಳಿಸಿದ್ದಾರೆ.
ಮಾರ್ಚ್ ಏಪ್ರಿಲ್ ಮೇ ಈ ಮೂರು ತಿಂಗಳ ಸಂಬಳ ಬಾರದೆ ಇರುವುದರಿಂದ ಸಿಬ್ಬಂದಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ.

ಸಿಬ್ಬಂದಿಗಳು ರಜೆ ಹಾಕಿರುವ ಹಿನ್ನೆಲೆಯಲ್ಲಿ ರೋಗಿಗಳಿಗೆ ಊಟ,ತಿಂಡಿ ಕೂಡ ಕ್ಯಾಂಟೀನ್ ನಿಂದ ತರುವ ಪರಿಸ್ಥಿತಿ ಉಂಟಾಗಿದೆ ಎಂದು ತಿಳಿದುಬಂದಿದೆ.










