ಗೋವಾ ಘನತ್ಯಾಜ್ಯ ಘಟಕ ವೀಕ್ಷಣೆ
ಸುಳ್ಯ ನಗರ ಪಂಚಾಯತ್ ನ 13 ಮಂದಿ ಪಂಚಾಯತ್ ಸದಸ್ಯರು, 10 ಮಂದಿ ಪೌರ ಕಾರ್ಮಿಕರು ಹಾಗೂ 15 ಮಂದಿ ಸಿಬ್ಬಂದಿಗಳ ಸಹಿತ 38 ಮಂದಿಯ ಅಧ್ಯಯನ ಪ್ರವಾಸ ಗೋವಾ ರಾಜ್ಯದಲ್ಲಿ ನಡೆಯಿತು.

ಜೂ.7ರಂದು ಸುಳ್ಯ ನಗರ ಪಂಚಾಯತ್ ಮುಂಭಾಗದಿಂದ ಪ್ರವಾಸ ಆರಂಭಗೊಂಡಿತು.















ಜೂ.8ರಂದು ಮುಂಜಾನೆ ಗೋವಾ ತಲುಪಿದ ತಂಡ ಅಲ್ಲಿ ದೇವಸ್ಥಾನ, ಚರ್ಚ್, ಬೀಚ್ ಪ್ರವಾಸಿ ತಾಣಗಳ ವೀಕ್ಷಣೆ ಮಾಡಲಾಯಿತು.
ಮೇ.9ರಂದು ಗೋವಾದ ಸಾಲೆಗಾಂವ್ ನಲ್ಲಿ 30 ಎಕ್ರೆ ಜಾಗದಲ್ಲಿ ಇರುವ ಘನತ್ಯಾಜ್ಯ ಘಟಕವನ್ನು ವೀಕ್ಷಿಸಿ ಮಾಹಿತಿ ಪಡೆದರು. ರಾತ್ರಿ ವೇಳೆ ಸುಳ್ಯದತ್ತ ಹೊರಟ ತಂಡ ಜೂ.10 ರಂದು ಮುಂಜಾನೆ ಸುಳ್ಯ ತಲುಪಿದ್ದಾರೆ.
ಅಧ್ಯಯನ ಪ್ರವಾಸ ತಂಡದಲ್ಲಿ ನ.ಪಂ. ಅಧ್ಯಕ್ಷೆ ಶಶಿಕಲಾ ಎ ನೀರಬಿದಿರೆ, ಉಪಾಧ್ಯಕ್ಷ ಬುದ್ದ ನಾಯ್ಕ್, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ಮುಖ್ಯಾಧಿಕಾರಿ ಸುಧಾಕರ, ಸದಸ್ಯರುಗಳಾದ ಎಂ.ವೆಂಕಪ್ಪ ಗೌಡ, ಸರೋಜಿನಿ ಪೆಲ್ತಡ್ಕ, ಶೀಲಾ ಕುರುಂಜಿ, ಶಿಲ್ಪಾ ಸುದೇವ್, ಕೆ.ಎಸ್. ಉಮ್ಮರ್, ಶರೀಫ್ ಕಂಠಿ, ಡೇವಿಡ್ ದೀರ ಕ್ರಾಸ್ತ, ರಿಯಾಜ್ ಕಟ್ಟೆಕಾರ್, ನಾಮನಿರ್ದೇಶನ ಸದಸ್ಯರುಗಳಾದ ರಾಜು ಪಂಡಿತ್, ಸಿದ್ದೀಕ್ ಕೊಕ್ಕೊ ಹಾಗೂ ಸಿಬ್ಬಂದಿಗಳು, ಪೌರಕಾರ್ಮಿಕರಿದ್ದರು.










