ಚೆಂಬು ಗ್ರಾಮದ ಊರುಬೈಲಿನಲ್ಲಿ ಕೃಷಿ ತೋಟಕ್ಕೆ ಕಾಡಾನೆ ಹಿಂಡು ದಾಳಿ ನಡೆಸಿ ಕೃಷಿ ನಾಶಪಡಿಸಿದ ಘಟನೆ ಜೂ.17 ರಂದು ನಡೆದಿದೆ.









ಊರುಬೈಲಿನ ಪಾಲ್ತಾಡು ಕೇಶವ , ಪೂವಯ್ಯ ಗೌಡ ಅವರ ತೋಟಕ್ಕೆ ಬೆಳ್ಳಂ ಬೆಳಿಗ್ಗೆ ಕಾಡಾನೆ ಹಿಂಡು ದಾಳಿ ಮಾಡಿದ್ದು, ತೆಂಗು, ಅಡಿಕೆ, ರಬ್ಬರ್ , ಬಾಳೆ ಕೃಷಿಗಳು ಸಂಪೂರ್ಣ ನಾಶಮಾಡಿದೆ. ಹಾಗೂ ನಿರಂತರ ಆನೆ ದಾಳಿಯಿಂದ ಕೃಷಿಕರು ಅಪಾರ ನಷ್ಟಕ್ಕೆ ಒಳಗಾಗಿದ್ದಾರೆ. ಆದಷ್ಟು ಬೇಗನೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿ ಹೇಳಿಕೊಂಡಿದ್ದಾರೆ.










