ಸುಮಾರು 17 ಲಕ್ಷ ಬಜೆಟ್ ನಲ್ಲಿ ಕಾರ್ಯಕ್ರಮ
ಶ್ರೀ ಶಾರದಾಂಬ ಸಮೂಹ ಸಮಿತಿ ಯ ವತಿಯಿಂದ ನಡೆಯುವ 54ನೇ ವರ್ಷದ ಸುಳ್ಯ ದಸರಾ ಉತ್ಸವದ ಪೂರ್ವಭಾವಿ ಸಭೆಯು ತಾಲೂಕು ಪಂಚಾಯತ್ ಸಭಾ ಭವನದಲ್ಲಿ ಜೂ. 24ರಂದು ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಶ್ರೀ ಶಾರದಾಂಬ ಸೇವಾ ಸತಿಯ ಅಧ್ಯಕ್ಷ ನಾರಾಯಣ ಕೇಕಡ್ಕ ಅವರು ವಹಿಸಿದ್ದರು.















ಸಭೆಯಲ್ಲಿ ಸೆಪ್ಟೆಂಬರ್ 29 ರಿಂದ ಮೊದಲ್ಗೊಂಡು ಅಕ್ಟೋಬರ್ 7 ರ ತನಕ ಉತ್ಸವ ನಡೆಸುವ ಬಗ್ಗೆ ಚರ್ಚಿಸಿ, ಸುಮಾರು 17 ಲಕ್ಷ ಬಜೆಟ್ ನಲ್ಲಿ ಕಾರ್ಯಕ್ರಮ ನಡೆಸುವುದಾಗಿ ತೀರ್ಮಾನಿಸಲಾಯಿತು.
ಕೆಸರು ಗದ್ದೆಯಿಂದ ಪ್ರಾರಂಭಗೊಂಡ ಕಾರ್ಯಕ್ರಮವನ್ನು ಸುಳ್ಯ ದಸರಾ ಕಾರ್ಯಕ್ರಮ ಮುಗಿಯುವವರೆಗೆ ಎಲ್ಲಾ ರೀತಿಯ ವ್ಯವಸ್ಥೆಗಳ ಬಗ್ಗೆ ಸಭೆಯಲ್ಲಿ ತೀರ್ಮಾನಿಸಿದ ಬಳಿಕ ಮೂವರು ಒಂದುಂದು ದಿನ ನ್ನಧಾನದ ವ್ಯವಸ್ಥೆ ಮಾಡಿಸುವುದಾಗಿ ಸಭೆಯಲ್ಲಿ ಘೋಷಣೆ ಮಾಡಿದರು.
ಸಭೆಯಲ್ಲಿ ಗೋಕುಲದಾಸ್ ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮದ ಒಟ್ಟು ರೂಪುರೇಷೆಗಳನ್ನು ಡಾ.ಲೀಲಾದರ್ ಕೃಷ್ಣ,ಕಾಮತ್ ಅಶೋಕ್ ಪ್ರಭು, ಲತಾ ಮಧುಸೂದನ್ , ಜಯಪ್ರಕಾಶ್ ರೈ , ಶಶಿಕಲಾ ನೀರಬಿದಿರೆ ದಸರಾ ಉತ್ಸವ ತಯಾರಿ ಬಗ್ಗೆ ಮಾತನಾಡಿದರು.
ಗೋಕುಲದಾಸ್ ಸ್ವಾಗತಿಸಿ ನಾರಾಯಣ ಕೇಕಡ್ಕ ಪ್ರಸ್ತಾವಿಕ ಮಾತನಾಡಿ, ಬೂಡು ರಾಧಾಕೃಷ್ಣ ರೈ ವಂದಿಸಿದರು, ಸಂತೋಷ್ ಕುತ್ತಮೊಟ್ಟೆ ಕಾರ್ಯಕ್ರಮ ನಿರೂಪಿಸಿದರು.










