ಸಂಪಾಜೆ : ಶ್ರೀ ವಿಷ್ಣು ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟದ ವಾರ್ಷಿಕ ಮಹಾಸಭೆ

0

ಸಂಪಾಜೆ ಶ್ರೀ ವಿಷ್ಣು ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟದ ವಾರ್ಷಿಕ ಮಹಾಸಭೆ ಯು ಜೂನ್ 25ರಂದು ಒಕ್ಕೂಟದ ಅಧ್ಯಕ್ಷ ರಾದ ಶಿಲ್ಪಾ ಸನತ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ವೇದಿಕೆಯಲ್ಲಿ ವಲಯ ಮೇಲಿಚಾರಕರಾದ ಮಹೇಶ್‌, ಪಂಚಾಯತ್ ಅಧ್ಯಕ್ಷರಾದ ಸುಮತಿ ಶಕ್ತಿವೇಲು. ಪಿ ಡಿ ಓ ಸರಿತಾ ಒಲ್ಗ ಡಿಸೋಜ, ಸೊಸೈಟಿ ಉಪಾಧ್ಯಕ್ಷರಾದ ಯಮುನಾ ಬಿ ಎಸ್, ವಾರ್ಡ್ ನ ಪಂಚಾಯತ್ ಸದಸ್ಯರಾದ ಹಮೀದ್ ಜಿ. ಕೆ, ಅರೋಗ್ಯ ಸಹಾಯಕಿ ಭಾಗೀರಥಿ, ಒಕ್ಕೂಟದ ಕಾರ್ಯದರ್ಶಿ ಕವಿತಾ ಪೆರುಂಗೋಡಿ, ಪಂಚಾಯತ್ ಉಪಾಧ್ಯಕ್ಷರಾದ ಹನಿಫ್‌ ಎಸ್. ಕೆ. ಉಪಸ್ಥಿತರಿದ್ದರು.

ವಲಯ ಮೇಲ್ವಿಚಾರಕರು ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಪಿ ಡಿ ಓ. ಸಂಜೀವಿನಿ ಸಂಘದ ಸದಸ್ಯರು ಎಲ್ಲರೂ ಏನಾದರೊಂದು ಸ್ವ ಉದ್ಯೋಗ ಮಾಡಿ ಸ್ವಾವಲಂಬಿ ಜೀವನ ಮಾಡಬೇಕು ಎಂದು ತಿಳಿಸಿ ಆದಷ್ಟು ಬೇಗ ಅಕ್ಕ ಕೆಫೆ ಮಾಡುವುದರ ಮೂಲಕ ಗ್ರಾಮ ಕ್ಕೆ ಹೆಸರು ತರಬೇಕು ಎಂದು ಹೇಳಿದರು.

ಅರೋಗ್ಯ ಸಹಾಯಕಿ ಯವರು ನೀರು ನೈರ್ಮಲ್ಯ, ಮಹಿಳೆಯರ ಅರೋಗ್ಯ, ಪೋಷಣೆ, ಬಗ್ಗೆ ವಿವರವಾಗಿ ಮಾಹಿತಿಯನ್ನು ನೀಡಿದರು. 09-03-25 ರಂದು ನಡೆಸಿದ ಕ್ರೀಡಾ ಸ್ಪರ್ಧೆ ಗಳ ಬಹುಮಾನಗಳನ್ನು ಸಂಘದ ವಿಜೇತ ಸದಸ್ಯರಿಗೆ ನೀಡಲಾಯಿತು. ಸಂಘದ ಸದಸ್ಯೆ ಯಶೋಧ ಪ್ರಾಥನೆ ಮಾಡಿ, ಯಮುನಾ ಬಿ. ಎಸ್. ಸ್ವಾಗತಿಸಿದರು. ವಾರ್ಷಿಕ ವರಧಿಯನ್ನು ಕಾರ್ಯದರ್ಶಿ ಕವಿತಾ ಓದಿದರು. ವಾರ್ಷಿಕ ಲೆಕ್ಕಪತ್ರವನ್ನು ಎಂ. ಬಿ. ಕೆ. ಸಭೆಗೆ ಹೇಳಿದರು. ಮಹಾಸಭೆಯ ನಂತರ ನೂತನ ಒಕ್ಕೂಟ ರಚನೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ದೇವಕಿ ಬಂಗ್ಲೆಗುಡ್ಡೆ, ಕಾರ್ಯದರ್ಶಿ ಯಾಗಿ ಲಲನ ಕೆ. ಆ‌ರ್. ಆಯ್ಕೆ ಮಾಡಲಾಯಿತು. ಕೃಷಿ ಸಖಿ ಮೋಹಿನಿ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮ ನಿರೂಪಣೆ ಎಂ. ಬಿ ಕೆ. ಕಾಂತಿ ಬಿ. ಎಸ್. ನೆರವೇರಿಸಿದರು. ಕಾರ್ಯಕ್ರಮ ದಲ್ಲಿ ಪಂಚಾಯತ್ ಸದಸ್ಯರಾದ ಸುಂದರಿ ಮುಂಡಡ್ಕ, ವಿಮಲಾ ಪ್ರಸಾದ್, ರಜನಿ ಶರತ್ ಉಪಸ್ಥಿತ ರಿದ್ದರು. ಆಶಾ ಕಾರ್ಯಕರ್ತರು, ಒಟ್ಟು 66 ಜನ ಹಾಜರಿದ್ದರು.