ಕಾವು ಕ್ಯಾಂಪ್ಕೋ ಶಾಖೆಯ ಜೂನಿಯರ್ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಮಾರ್ಕೆಟಿಂಗ್ ಆಫೀಸರ್ ರಾಘವ ಸಾರಕರೆ ನಿವೃತ್ತಿ

0

ಕಾವು ಕ್ಯಾಂಪ್ಕೋ ಶಾಖೆಯಲ್ಲಿ ಜೂನಿಯರ್ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಮಾರ್ಕೆಟಿಂಗ್ ಆಫೀಸರ್ ಅಗಿದ್ದ ಐವರ್ನಾಡಿನ ರಾಘವ ಸಾರಕರೆಯವರು ಜೂ.30 ರಂದು ಸೇವಾ ನಿವೃತ್ತಿಗೊಂಡಿದ್ದಾರೆ.


1988 ರಲ್ಲಿ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ಕ್ಯಾಂಪ್ಕೋ ಶಾಖೆಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕೆಲಸಕ್ಕೆ ಸೇರಿದ ಇವರು
1991 ರಲ್ಲಿ ಪರ್ಮನೆಂಟ್ ಆಗಿ ಆಯ್ಕೆಯಾದರು.


ಬಳಿಕ 1992 ರಲ್ಲಿ ಚೆನ್ನಗಿರಿಯಿಂದ ಸುಳ್ಯ ಕ್ಯಾಂಪ್ಕೋ ಶಾಖೆಗೆ ವರ್ಗಾವಣೆಗೊಂಡು ಬಂದರು.
ಸುಳ್ಯದಲ್ಲಿ 2011 ರವರೆಗೆ ಸೇವೆ ಸಲ್ಲಿಸಿ ಬಳಿಕ ಮುಳ್ಳೇರಿಯಾ ಶಾಖೆಗೆ ವರ್ಗಾವಣೆಗೊಂಡರು.


ನಂತರ ಸುಳ್ಯ ಶಾಖೆಗೆ ವರ್ಗಾವಣೆಗೊಂಡು ಸುಳ್ಯದಲ್ಲಿ ಜೂನಿಯರ್ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಮಾರ್ಕೆಟಿಂಗ್ ಆಫೀಸರ್ ಆಗಿ ಭಡ್ತಿ ಹೊಂದಿದರು.
ನಂತರ ಕಾವು ಕ್ಯಾಂಪ್ಕೋ ಶಾಖೆಗೆ ವರ್ಗಾವಣೆಗೊಂಡು ಅಲ್ಲಿ ಕೆಲಸ ನಿರ್ವಹಿಸಿ ಜೂ.30 ರಂದು ಸೇವೆಯಿಂದ ನಿವೃತ್ತಿಗೊಂಡಿರುತ್ತಾರೆ.
ಇವರು ಐವರ್ನಾಡು ಗ್ರಾಮದ ಸಾರಕರೆಯವರಾಗಿದ್ದು ಇವರ ಪತ್ನಿ ಶ್ರೀಮತಿ ಶಶಿಕಲಾ ಗೃಹಿಣಿಯಾಗಿದ್ದಾರೆ.


ಪುತ್ರ ಪರೀಕ್ಷಿತ್ ಬೆಳ್ಳಾರೆ ಕೆಪಿಎಸ್ ನಲ್ಲಿ ಒಂಬತ್ತನೆ ತರಗತಿಯಲ್ಲಿ ಮತ್ತು ಪುತ್ರಿ ಪ್ರಾರ್ಥನಾ ಏಳನೆ ತರಗತಿಯಲ್ಲಿ ಕಲಿಯುತ್ತಿದ್ದಾರೆ.