ದ. ಕ ಸಂಪಾಜೆ ಗ್ರಾಮ ಪಂಚಾಯತ್ ಪ್ರಥಮ ಹಂತದ ಗ್ರಾಮ ಸಭೆ

0

ಪ್ಲಾಟಿಂಗ್ ಸಮಸ್ಯೆ, ವಿದ್ಯುತ್ ಸಮಸ್ಯೆ, ಚರಂಡಿ ವ್ಯವಸ್ಥೆ, ಸ್ವಚ್ಛತೆ ,ಮೊದಲಾದ ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚೆ

ದ .ಕ ಸಂಪಾಜೆ ಗ್ರಾಮ ಪಂಚಾಯತ್ 2025- 26ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜು.3 ರಂದು ನಡೆಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಮತಿ ಶಕ್ತಿವೇಲು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಸಾಮಾಜಿಕ ಅರಣ್ಯ ವಲಯ ಅಧಿಕಾರಿ ಸಂಜು ಡಿ. ಲಮಾಣಿ
ಅವರು ನೋಡೆಲ್ ಅಧಿಕಾರಿಯಾಗಿ ಉಪಸ್ಥಿತರಿದ್ದರು.

ಅಂಗನವಾಡಿ ಕಾರ್ಯಕರ್ತೆ ಹಾಗೂ ವಿದ್ಯಾರ್ಥಿನಿ ಗ್ರೀಷ್ಮ ಅವರು ನಾಡಗೀತೆ ಹಾಡುವುದರ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು. ಗ್ರಾಂ.ಪಂ ಅಭಿವೃದ್ಧಿ ಅಧಿಕಾರಿ ಸರಿತಾ ವೋಲ್ಗಾ ಡಿಸೋಜಾ ಸರ್ವರನ್ನು ಸ್ವಾಗತಿಸಿದರು. ಗ್ರಾಂ .ಪಂ ಗುಮಾಸ್ತೆ ಗೋಪಮ್ಮ ಅವರು ಗ್ರಾಮಸಭೆಯ ವರದಿ ಮತ್ತು ಜಮಾ ಖರ್ಚಿನ ವಿವರ ಮಂಡಿಸಿದರು.

ಬಳಿಕ ಸಭೆಯಲ್ಲಿ ವಿವಿಧ ಇಲಾಖಾ ಅಧಿಕಾರಿಗಳು ಇಲಾಖೆಯ ಸೌಲಭ್ಯ, ಮುಂಜಾಗೃತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಗ್ರಾಮದ ಮೂಲಭೂತ ಸೌಲಭ್ಯಗಳಾದ ಗ್ರಾಮೀಣ ಪ್ರದೇಶದ ರಸ್ತೆ ಸಮಸ್ಯೆ, ವಿದ್ಯುತ್ ಸಮಸ್ಯೆ, ವಿದ್ಯುತ್ ಕಂಬಗಳ ಸರಿ ಪಡಿಸುವಿಕೆ ಮತ್ತು ತೆಗೆಸುವಿಕೆ, ನೀರಿನ ಸಮಸ್ಯೆ, ಚರಂಡಿ ಮೋರಿ ವ್ಯವಸ್ಥೆ, ಮನೆ ನಿವೇಶನ, ಅಪಾಯಕಾರಿ ಕೊಂಬೆಗಳ ಕಡಿಯುವ ಬಗ್ಗೆ, ಅಂಗನವಾಡಿ ಮಕ್ಕಳ ಪೌಸ್ಟಿಕ ಆಹಾರದ ಬಗ್ಗೆ, ಕಾಡುಪ್ರಾಣಿಗಳ ಹಾವಳಿಯಿಂದ ಕೃಷಿ , ಪ್ಲಾಟಿಂಗ್ ಸಮನಾಶ, ಸೋಲಾ‌ರ್ ತಂತಿ ಅಳವಡಿಸಿಕೆ, ಸ್ಯೆ, ಸ್ವಚ್ಛತೆ, ಮೊದಲಾದ ಸಮಸ್ಯೆಗಳ ಮತ್ತು ಕಾಮಗಾರಿಗಳ ಬಗ್ಗೆ ಕುರಿತು, ವಾರ್ಡ್ ನ ಸಭೆಗಳ ಕುರಿತು ಮಾಹಿತಿ ಮೊದಲಾದ ಬಗ್ಗೆ
ಚರ್ಚಿಸಲಾಯಿತು.

ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಎಸ್. ಕೆ ಹನೀಫ್, ಮಾಜಿ ಅಧ್ಯಕ್ಷ ಜಿ. ಕೆ ಹಮೀದ್, ಸದಸ್ಯರುಗಳಾದ ಸೋಮಶೇಖ‌ರ್ ಕೊಯಿಂಗಾಜೆ, ಜಗದೀಶ್ ರೈ , ಶ್ರೀಮತಿ ಸುಂದರಿ ಮುಂಡಡ್ಕ, ,ಶ್ರೀಮತಿ ವಿಮಲಾ ಪ್ರಸಾದ್, ಶ್ರೀಮತಿ ರಜನಿ ಶರತ್, ಸುಶೀಲಾ, ಅನುಪಮಾ, ತೋಟಗಾರಿಕೆ ಇಲಾಖೆ, ಬಿಸಿಎಂ ಇಲಾಖೆ, ಉದ್ಯೋಗ ಖಾತರಿ ತೋಟಗಾರಿಕೆ ಇಲಾಖೆ, ಸಮಾಜ ಕಲ್ಯಾಣ ಇಲಾಖೆ,
ಬಿಸಿಎಂ ಇಲಾಖೆ, ಮೆಸ್ಕಾಂ ಇಲಾಖೆ, ಪಶು ಪಾಲನಾ ಮತ್ತು ಪಶು ವೈದ್ಯ ಇಲಾಖೆ ಅಧಿಕಾರಿ, ತಾಲೂಕು ನಗರ ಪಂಚಾಯತ್, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಮೆಸ್ಕಾಂ, ಅಂಗನವಾಡಿ ಸಿಬ್ಬಂದಿ, ಆಶಾ ಕಾರ್ಯಕರ್ತರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಗ್ರಾಮದ ಗಣಪತಿ ಭಟ್ , ಜಗದೀಶ್ ಕೆ. ಪಿ, ಯಮುನಾ , ಜಯಾನಂದ ಸಂಪಾಜೆ, ವಿಜಯ ಆಲಡ್ಕ, ಕೇಶವ ಬಂಗ್ಲೆಗುಡ್ಡೆ, ಕಾಂತಿ.ಬಿ.ಎಸ್ ಪಂಚಾಯತ್ ಸಿಬ್ಬಂದಿಗಳಾದ, ಭರತ್, ಉಮೇಶ್ ಎಂ.ಆರ್ , ಮಧುರಾ ಕುಮಾರಿ,ಅಂಗನವಾಡಿ ಸಿಬ್ಬಂದಿ, ಆಶಾ ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.

ಗ್ರಾಂ.ಪಂ ಅಭಿವೃದ್ಧಿ ಅಧಿಕಾರಿ ಸರಿತಾ ವೋಲ್ಗಾ ಡಿಸೋಜಾ ಸರ್ವರನ್ನು ಸ್ವಾಗತಿಸಿ ಕಾಂತಿ ಬಿ. ಎಸ್ ಕಾರ್ಯಕ್ರಮ ನಿರೂಪಿಸಿ, ಗ್ರಾ. ಪಂ ಉಪಾಧ್ಯಕ್ಷ ಎಸ್. ಕೆ. ಹನೀಫ್ ವಂದಿಸಿದರು.

ಕೊನೆಗೆ ರಾಷ್ಟ ಗೀತೆಯನ್ನು ಹಾಡುವ ಮೂಲಕ ಸಭೆಯು ಮುಕ್ತಾಯಗೊಂಡಿತು.