ಸುದ್ದಿ ವರದಿ‌‌ : ಜನರ ಸಮಸ್ಯೆಗೆ ಲೋಕೋಪಯೋಗಿ ಇಲಾಖೆ ಸ್ಪಂದನೆ

0

ಅಡ್ಕಾರ್ ಟು ಪೇರಾಲು ರಸ್ತೆಯಲ್ಲಿ ನೀರು ನಿಲ್ಲುವ ಜಾಗಕ್ಕೆ ಚರಂಡಿ ನಿರ್ಮಾಣ

ಜಾಲ್ಸೂರು ಗ್ರಾಮದ ಅಡ್ಕಾರು ದ್ವಾರದ ಬಳಿಯಿಂದ ಮಂಡೆಕೋಲು ಗ್ರಾಮದ ಪೇರಾಲು ತನಕ ರಸ್ತೆಯ ಬದಿಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲೇ ನೀರು ನಿಂತು ಸಂಚಾರಕ್ಕೆ ಸಮಸ್ಯೆ ಯಾಗುತಿತ್ತು.

ಅಲ್ಲದೆ ಮಣ್ಣುಗಳು ಕೂಡಾ ರಸ್ತೆಯಲ್ಲೇ ನಿಂತಿತ್ತು. ಈ ಸಮಸ್ಯೆಯ ಕುರಿತು ಅಶ್ವಿನ್ ಪೇರಾಲುರವರು ಸುದ್ದಿಯ ಗಮನಕ್ಕೆ ತಂದಿದ್ದರು. ಸುದ್ದಿಯಲ್ಲಿ ಚಿತ್ರ ಸಹಿತ ಸಮಸ್ಯೆಯ ವರದಿ ಪ್ರಕಟವಾಗಿತ್ತು.

ಜು.1 ಮತ್ತು 2ರಂದು ಲೋಕೋಪಯೋಗಿ ಇಲಾಖೆಯವರು ರಸ್ತೆಯಲ್ಲಿ ನೀರು ನಿಂತು ಸಮಸ್ಯೆ ಆಗುತಿದ್ದ ಸ್ಥಳದಲ್ಲಿ ಜೆಸಿಬಿ ಮೂಲಕ ಅಗೆದು ಸಮಸ್ಯೆ ನಿವಾರಿಸಿದ್ದಾರೆಂದು ತಿಳಿದುಬಂದಿದೆ.

ರಸ್ತೆಯ ಮೇಲೆ ನಿಂತಿದ್ದು ಮಣ್ಣುಗಳನ್ನು ಕೂಡಾ ತೆರವು ಮಾಡಿದ್ದಾರೆ.