Home ಚಿತ್ರವರದಿ ಸುಳ್ಯ: ಸ.ಪದವಿ ಪೂರ್ವ ಕಾಲೇಜಿನಲ್ಲಿ ಸಾಮಾಜಿಕ ಜಾಲತಾಣಗಳ ಪ್ರಭಾವ ಮತ್ತು ಮಾದಕ ವಸ್ತು ವಿರೋಧಿ ಜಾಗೃತಿ...

ಸುಳ್ಯ: ಸ.ಪದವಿ ಪೂರ್ವ ಕಾಲೇಜಿನಲ್ಲಿ ಸಾಮಾಜಿಕ ಜಾಲತಾಣಗಳ ಪ್ರಭಾವ ಮತ್ತು ಮಾದಕ ವಸ್ತು ವಿರೋಧಿ ಜಾಗೃತಿ ಕಾರ್ಯಕ್ರಮ

ಇನ್ನರ್ ವೀಲ್ ಕ್ಲಬ್ ಮತ್ತು ರೆಡ್ ಕ್ರಾಸ್ ವತಿಯಿಂದ ಆಯೋಜನೆ

0

ಮಕ್ಕಳಿಗೆ ಈಗಿನ ಕಾಲಘಟ್ಟದಲ್ಲಿ ಪೋಕ್ಸೋ ಜಾಗೃತಿ ಅತ್ಯವಶ್ಯ – ಕ್ರೈಂ ಎಸ್ಐ ಶ್ರೀಮತಿ ಸರಸ್ವತಿ

ಇನ್ನರ್ ವೀಲ್ ಕ್ಲಬ್ ಸುಳ್ಯದ ವತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ದಲ್ಲಿ “ಸಾಮಾಜಿಕ ಜಾಲತಾಣಗಳ ಪ್ರಭಾವ ಮತ್ತು ಮಾದಕ ವಸ್ತು ವಿರೋಧಿ ಜಾಗೃತಿ ಕಾರ್ಯಕ್ರಮ” ಜು.5 ರಂದು ಶಾಲೆಯ ರೆಡ್ ಕ್ರಾಸ್ ವಿಭಾಗದ ಸಹಯೋಗದಲ್ಲಿ ಜರುಗಿತು. ಇನ್ನರ್ ವೀಲ್ ಕ್ಲಬ್ ನ ಅಧ್ಯಕ್ಷೆ, ಕೆವಿಜಿ ಇಂಜಿನಿಯರಿ೦ಗ್ ಕಾಲೇಜಿನ ಉಪನ್ಯಾಸಕಿ ಡಾ.ಸವಿತಾ ಸಿ. ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಸುಳ್ಯ ಪೊಲೀಸ್ ಠಾಣಾ ಅಪರಾಧ ತನಿಖಾ ವಿಭಾಗದ ಎಸ್ ಐ ಶ್ರೀಮತಿ ಸರಸ್ವತಿ ಮಾತನಾಡಿ
ಮಾಧಕ ವಸ್ತುಗಳಿಂದಾಗುವ ದುಷ್ಪರಿಣಾಮಗಳು ಅದಕ್ಕೆ ಕಾನೂನುನಿನಲ್ಲಿ ಬರುವ ಶಿಕ್ಷೆಗಳು, ಇದರ ಚಟಕ್ಕೆ ಬಿದ್ದ ಬಳಿಕ ಜೀವನದಲ್ಲಿ ಉಂಟಾಗುವ ಅಪರಾಧ ಕೃತ್ಯಗಳು ಮತ್ತು ಮೊಬೈಲ್ ಬಳಕೆಯಿಂದ ಇತ್ತೀಚಿನ ಸಾಮಾಜಿಕ ಜಾಲತಾಣಗಳಿಂದ ಉಂಟಾಗುವ ಪ್ರಭಾವಗಳು, ಇದರಿಂದ ವಿದ್ಯಾರ್ಥಿಗಳ ರಕ್ಷಣೆ ಮುಂತಾದ ವಿಷಯಗಳ ಕುರಿತು ಮಾಹಿತಿ ನೀಡಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.

ಇನ್ನೋರ್ವ ಸಂಪನ್ಮೂಲ ವ್ಯಕ್ತಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಪುತ್ತೂರು ಇಲ್ಲಿಯ ಉಪನ್ಯಾಸಕರಾದ ಡಾ. ಮನುಜೇಶ್ ಬಿ. ಜೆ. ಮಾತನಾಡಿ ಈಗಿನ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಯಾವ ರೀತಿ ಮೊಬೈಲ್ ಬಳಕೆ ಮಾಡಬೇಕೆಂದು ಮಾಹಿತಿ ನೀಡಿದರು.

ಕಾರ್ಯಕ್ರಮದ ಆರಂಭದಲ್ಲಿ ಸುಳ್ಯ ಜೂನಿಯರ್ ಕಾಲೇಜ್ ವಿಭಾಗದಿಂದ ಕಳೆದ ವರ್ಷ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಶಾಲೆಗೆ ಪ್ರಶಸ್ತಿ ತಂದ ವಿದ್ಯಾರ್ಥಿಗಳಿಂದ ಮೊಬೈಲ್ ಬಳಕೆಯಿಂದ ಉಂಟಾಗುವ ದುಷ್ಪರಿಣಾಮದ ಬಗ್ಗೆ ಸ್ಕಿಟ್ ನಡೆಯಿತು.

ಶಾಲಾ ಉಪಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯರು ಸ್ವಾಗತ ಭಾಷಣ ಮಾಡಿ, ಕ್ಲಬ್ ನ ಕಾರ್ಯದರ್ಶಿ ಹಾಗೂ ಕೆವಿಜಿ ಇಂಜಿನಿಯರಿ0ಗ್ ಕಾಲೇಜಿನ ಉಪನ್ಯಾಸಕಿ ಡಾ.ಪ್ರಜ್ಞಾ ಎಂ.ಆರ್. ವಂದನಾರ್ಪಣೆ ಗೈದರು. ರೆಡ್ ಕ್ರಾಸ್ ವಿಭಾಗದ ಶಾಲಾ ಸಂಚಾಲಕಿ ಮಮತಾ ಕಾರ್ಯಕ್ರಮ ನಿರೂಪಿಸಿದರು.ಶಾಲೆಯ ವಿದ್ಯಾರ್ಥಿಗಳು ಹಾಗೂ ಇನ್ನರ್ ವೀಲ್ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

NO COMMENTS

error: Content is protected !!
Breaking