ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅರೆಭಾಷೆಯಲ್ಲಿ ಯಕ್ಷಗಾನ ತಾಳಮದ್ದಳೆ ಕಾರ್ಯಾಗಾರ ಜು. 12 ರಂದು ನಡೆಯಲಿದೆ.
ಸುಳ್ಯದ ಕನ್ನಡ ಭವನದಲ್ಲಿ ನಡೆಯುವ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಖ್ಯಾತ ಯಕ್ಷಗಾನ ಅರ್ಥಧಾರಿಗಳಾದ ಜಬ್ಬಾರ್ ಸಮೋ ಸಂಪಾಜೆ, ಹಾಗು ಭಾಗವತೆ ಶ್ರೀಮತಿ ಭವ್ಯಶ್ರೀ ಮಂಡೆಕೋಲುವರವರು ಭಾಗವಹಿಸಲಿದ್ದಾರೆ. ಕಾರ್ಯಾಗಾರದಲ್ಲಿ ಹದಿನೆಂಟು ವರ್ಷ ಮೇಲ್ಪಟ್ಟ ವಯೋಮಾನದವರಿಗೆ ಭಾಗವಹಿಸಲು ಅವಕಾಶವಿದ್ದು ,ಉಚಿತ ತರಬೇತಿ ಕಾರ್ಯಾಗಾರವಾಗಿದ್ದು, ಆಸಕ್ತ ಮೂವತ್ತು ಜನ ಕಲಾಸಕ್ತರಿಗೆ ಮಾತ್ರ ಅವಕಾಶವಿರುತ್ತದೆ.
ಹಾಗು ಭಾಗವಹಿಸುವ ಕಲಾವಿದರಿಗೆ ಊಟದ ವ್ಯವಸ್ಥೆ ಹಾಗು ಅಕಾಡೆಮಿಯ ಪ್ರಮಾಣ ಪತ್ರನೀಡಿ ಗೌರವಿಸಲಾಗುತ್ತದೆ.

ಅರೆಭಾಷೆ ಯಕ್ಷಗಾನ ತಾಳಮದ್ದಳೆ ಕಾರ್ಯಾಗಾರದಲ್ಲಿ ಅರೆಭಾಷೆಯಲ್ಲಿ, ಕಥಾ ಶೈಲಿ, ಪಾತ್ರ ಪ್ರವೇಶ, ಮಾತಾಡುವ ಶೈಲಿ,ತಾಳ ಜ್ಞಾನ, ಪುರಾಣದ ಪಾತ್ರಗಳ ಅರೆಭಾಷೆಗೆ ಹೊಂದಿಸುವ ಕಲೆಗಾರಿಕೆ ಮುoತಾದ ವಿಷಯಗಳ ಬಗ್ಗೆ ಒಂದು ದಿನದ ಕಾರ್ಯಾಗಾರ ನಡೆಯಲಿದೆ ಎಂದು ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿಯವರು ಪತ್ರಿಕಾ ಪ್ರಕಟಣೆ ಯಲ್ಲಿ ಹೇಳಿದ್ದಾರೆ.
ಹೆಸರು ನೋಂದಾಯಿಸಿಕೊಳ್ಳಲು ಹಾಗು ಹೆಚ್ಚಿನ ಮಾಹಿತಿಗಾಗಿ ರಿಜಿಸ್ಟ್ರಾರ್ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ.ಕಾಫಿಕೃಪಾ ರಾಜಾಸೀಟ್ ರಸ್ತೆ ಮಡಿಕೇರಿ ,571201 ದೂರವಾಣಿ :9611355496,6363783983 ಗೆ ಸಂಪರ್ಕಿಸಲು ಕೋರಲಾಗಿದೆ.