ಅಮರ ಸಂಘಟನಾ ಸಮಿತಿ (ರಿ) ಸುಳ್ಯ, ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಸುಳ್ಯ ಹಾಗೂ ನಾಗ ಸಾನಿಧ್ಯ,ಗುಳಿಗ ಸಾನಿಧ್ಯ ಮರ್ಕಂಜ ಇದರ ಸಂಯುಕ್ತ ಆಶ್ರಯದಲ್ಲಿ ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಸುಳ್ಯದ ವಿದ್ಯಾರ್ಥಿಗಳಿಗೆ ೬ನೇ ವರ್ಷದ ‘ಕಂಡಡೊಂಜಿ ದಿನ’, ಬಲೆ ಗೊಬ್ಬುಗ… ಕಾರ್ಯಕ್ರಮವು ಜುಲಾಯಿ ೬ರಂದು ಮರ್ಕಂಜದ ಪನ್ನೆ ಬೈಲಿನಲ್ಲಿ ನಡೆಯಿತು.

ರೋಟರಿ ಕ್ಲಬ್ ಸುಳ್ಯ ಇದರ ಅಧ್ಯಕ್ಷರಾಗಿರುವ ರೊ.ಡಾ. ರಾಮ್ ಮೋಹನ್ ಕೆ ಎನ್ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸುಳ್ಯದ ರೋಟರಿ ವಿದ್ಯಾ ಸಂಸ್ಥೆಗಳ ಸಂಚಾಲಕರಾಗಿರುವ ರೊ.ಪಿಪಿ ಪಿಹೆಚ್ಎಫ್ ಪ್ರಭಾಕರನ್ ನಾಯರ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಶೋಭಾ ಬೊಮ್ಮೆಟ್ಟಿ ಅವರು ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸಿ ಕಾಲೇಜಿನ ವಿದ್ಯಾರ್ಥಿನಿ ಕು. ವೈಷ್ಣವಿ ಅವರು ವಂದಿಸಿದರು.ವಿದ್ಯಾರ್ಥಿಗಳಾದ ಕ್ಷಿತೀಶರಾಮ್ ಮತ್ತು ಗ್ರೀಷ್ಮ.ಎಂ ಕಾರ್ಯಕ್ರಮದ ನಿರೂಪಣೆ ಗೈದರು. ಜನಪದ ಕಲೆ, ಆಚಾರ-ವಿಚಾರ, ಸಂಸ್ಕೃತಿ-ಶಿಷ್ಟಾಚಾರಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮೊದಲ್ಗೊಂಡ ಈ ಕಾರ್ಯಕ್ರಮದಲ್ಲಿ ಗದ್ದೆಯಲ್ಲಿ ಕೋಣಗಳನ್ನು ಓಡಿಸುವ ಮೂಲಕ ಕಂಬಳದ ಪ್ರಾತ್ಯಕ್ಷಿಕೆಯನ್ನು ಊರಿನ ಮಹನೀಯರು ನೀಡಿದರು.
















ತದನಂತರ ನೇಜಿ ನೆಡುವ ಪ್ರಾತ್ಯಕ್ಷಿಕೆಯನ್ನು ಊರಿನ ಮಹಿಳೆಯರು ಓಬೇಲೆ ಹಾಡಿನ ಜೊತೆಗೆ ನೀಡಿದರು. ಶ್ರೀ ಹರೀಶ್ ಕಂಜಿಪಿಲಿ ಅಧ್ಯಕ್ಷರು ಜೀರ್ಣೋದ್ಧಾರ ಸಮಿತಿ ಮಿನುಂಗೂರು ದುರ್ಗಾಪರಮೇಶ್ವರಿ ದೇವಸ್ಥಾನ, ಅಮರ ಸಂಘಟನಾ ಸಮಿತಿ (ರಿ) ಸುಳ್ಯದ ಗೌರವ ಅಧ್ಯಕ್ಷರಾದ ಶ್ರೀ ಸಾತ್ವಿಕ್ ಮಡಪ್ಪಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಬಂಧಕರಾದ ಶ್ರೀ ಬಾಲಕೃಷ್ಣ ಪಾಟಾಳಿ, ಮರ್ಕಂಜ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿರುವ ಶ್ರೀಮತಿ ಗೀತಾ ಹೊಸೋಳಿಕೆ,ಗದ್ದೆಯ ಮಾಲಿಕರಾದ ಶ್ರೀ ಅಂಬಾಡಿ ಪನ್ನೆ, ಪನ್ನೇಬೈಲು ಮರ್ಕಂಜ, ರೊ.ಶ್ರೀ ಮಧುಸೂದನ್, ರೊ.ಲತಾ ಮಧುಸೂದನ್, ರೋಟರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವೀಣಾ ಶೇಡಿಕಜೆ ಮೊದಲಾದವರು ಉಪಸ್ಥಿತರಿದ್ದರು.

ಮುಂಜಾನೆಯಿಂದ ಮುಸ್ಸಂಜೆಯ ವರೆಗೆ ನಡೆದ ಜನಪದ ಹಲವು ಮನರಂಜನಾ ಕಲೆಗಳು, ಆಟೋಟ ಸ್ಪರ್ಧೆಗಳಿಂದ ಕಂಗೊಳಿಸಿದ ಈ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅಮರ ಸಂಘಟನಾ ಸಮಿತಿ (ರಿ) ಸುಳ್ಯ ಇದರ ಅಧ್ಯಕ್ಷರಾಗಿರುವ ಶ್ರೀ ಕುಸುಮಾಧರ ಮುಕ್ಕೂರು ಅವರು ವಹಿಸಿದ್ದರು. ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಇದರ ಅಧ್ಯಕ್ಷರಾಗಿರುವ ಶ್ರೀ ಹರೀಶ್ ಇಂಜಾಡಿ ಅವರು ಸ್ಪರ್ಧಾ ವಿಜೇತರಿಗೆ ಬಹುಮಾನವನ್ನು ವಿತರಿಸಿ ಶುಭಹಾರೈಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಸಂತೋಷ್ ಬಿಪಿ(ಉಪನಿರೀಕ್ಷಕರು ಆರಕ್ಷಕ ಠಾಣೆ ಸುಳ್ಯ),ಶ್ರೀ.ಕೆ.ರಾಜು ಪಂಡಿತ್(ಸದಸ್ಯರು ನಗರ ಪಂಚಾಯತ್ ಸುಳ್ಯ), ಶ್ರೀಮತಿ ಸಂಧ್ಯಾ ಸೇವಾಜೆ(ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಮರ್ಕಂಜ) ಅವರು ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು. ಶ್ರೀ ಗೋಪಾಲ.ಕೆ(ಉಪ ತಹಶೀಲ್ದಾರರು ಕಡಬ ತಾಲೂಕು)ಅವರು ತುಳುನಾಡಿನ ವ್ಯಾಪ್ತಿ ಮತ್ತು ಮಣ್ಣಿನ ಸೊಗಡನ್ನು ಬಣ್ಣಿಸಿದರು.
ಶ್ರೀ ಶಾಂತಪ್ಪ ರೈ ಮರ್ಕಂಜ(ಗದ್ದೆ ಬೇಸಾಯಗಾರರು) ಮೊದಲಾದವರು ಉಪಸ್ಥಿತರಿದ್ದು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು. ಈ ದಿನದ ಸಂಪೂರ್ಣ ಕಾರ್ಯಕ್ರಮದ ವೀಕ್ಷಕ ವಿವರಣೆಗಾರರಾಗಿ ಶಶಿಕಾಂತ್ ಮಿತ್ತೂರು, ತೀರ್ಥೇಶ್ ನಾರ್ಣಕಜೆ ಮತ್ತು ನವೀನ್ ಬಾಂಜಿಕೋಡಿ ಅವರು ಸಹಕರಿಸಿದರು. ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಉಪನ್ಯಾಸಕರಾಗಿರುವ ಶ್ರೀ ಮಧುಸೂಧನ್ ಅವರು ಕಾರ್ಯಕ್ರಮಕ್ಕೆ ಆಗಮಿಸಿದ, ಸಹಕರಿಸಿದ ಎಲ್ಲರಿಗೂ ಧನ್ಯವಾದ ಗೈದರು. ‘ಕಂಡಡೊಂಜಿ ದಿನ ಕಾರ್ಯಕ್ರಮವು ಗತಕಾಲ ಮರುಕಳಿಸುವಂತೆ ತುಂಬು ಸಂತಸದೊಂದಿಗೆ ನೆರವೇರಿತು.










