ಮಡಪ್ಪಾಡಿಗೆ ಬಸ್ ಸಂಚಾರ ಇಂದಿನಿಂದ ಆರಂಭ ಅಧಿಕಾರಿಗಳಿಂದ ಭರವಸೆ
ಮಡಪ್ಪಾಡಿಯಲ್ಲಿ ಸಂಜೆ ಬಂದು ತಂಗುತ್ತಿದ್ದ ಸರಕಾರಿ ಬಸ್ಸು ಇಂದಿನಿಂದ(ಜು.7) ಪುನರಾರಂಭವಾಗುವುದು ಎಂದು ತಿಳಿದು ಬಂದಿದೆ.
ಮಡಪ್ಪಾಡಿಯಲ್ಲಿ ರಾತ್ರಿ ತಂಗುತ್ತಿದ್ದ ಸರಕಾರಿ ಬಸ್ಸು ಕೋವಿಡ್ ಲಾಕ್ ಡೌನ್ ಆದ ಸಮಯದಿಂದ ಬರುತ್ತಿರಲಿಲ್ಲ.
ಹೀಗಾಗಿ ಬೆಳಿಗ್ಗೆ 7 ಗಂಟೆಗೆ ಹೊರಡುವ ಬಸ್ಸು ಇಲ್ಲದ ಕಾರಣ ಮಡಪ್ಪಾಡಿ ಭಾಗದ ಜನರು ಸರಿಯಾದ ಸಮಯಕ್ಕೆ ಬಸ್ಸು ಇಲ್ಲದೇ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದರು. ಅಲ್ಲದೇ ಮಡಪ್ಪಾಡಿಯಲ್ಲಿ ತಂಗುವ ಬಸ್ಸು ಬೇಕೆಂದು ಸಾರ್ವಜನಿಕರು ಆಗ್ರಹ ವ್ಯಕ್ತ ಪಡಿಸಿದ್ದರು.
ಗ್ರಾಮಸ್ಥರ ಸಮಸ್ಯೆಯ ಬಗ್ಗೆ ಸ್ಥಳೀಯ ಮುಖಂಡರಾದ ಪಿ. ಸಿ. ಜಯರಾಮ, ಗ್ಯಾರಂಟಿ ಸಮಿತಿ ಸದಸ್ಯ ಸೋಮಶೇಖರ ಕೇವಳ, ಗ್ರಾ.ಪಂ. ಸದಸ್ಯ ಮಿತ್ರದೇವ ಮಡಪ್ಪಾಡಿ ಮತ್ತಿತರರು ಗ್ಯಾರಂಟಿ ಸಮಿತಿ ಸಭೆಯಲ್ಲಿ ಚರ್ಚಿಸಿದರಲ್ಲದೆ ಇಲಾಖೆಗೆ ಮನವಿ ನೀಡಿದ್ದರು.















ಇಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಸುಳ್ಯ ಕೆಎಸ್ಆರ್ಟಿಸಿ ಡಿಪೋ ಅಧಿಕಾರಿಗಳನ್ನು ಭೇಟಿ ಮಾಡಿದರು.
ಈ ಸಂದರ್ಭ “ಇಂದು ಸಂಜೆ 6.15 ಕ್ಕೆಮಡಪ್ಪಾಡಿಗೆ ಬಸ್ ಸಂಚಾರ ಆರಂಭಗೊಳ್ಳಲಿದೆ ಮತ್ತು ಅದೇ ಬಸ್ ಮಡಪಾಡಿಯಲ್ಲಿ ವಾಸ್ತವ್ಯ ಇದ್ದು ಮರುದಿನ ಬೆಳಗ್ಗೆ 7.15 ಕ್ಕೆ ಹೊರಡಲು ವ್ಯವಸ್ಥೆ ಮಾಡುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಲ್ಲದೆ ಇನ್ನು ಕೆಲವೇ ಕೆಲವು ದಿನಗಳಲ್ಲಿ ಆಲೆಟ್ಟಿ ಗ್ರಾಮದ ಬಡ್ಡಡ್ಕಕ್ಕೆ, ಮತ್ತು ಬೆಳಿಗ್ಗೆ 7 ಗಂಟೆಯಿಂದ ಸುಬ್ರಹ್ಮಣ್ಯದಿಂದ ಹೊರಟು ದುಗಲಡ್ಕ ಮೂಲಕ ಕೊಡಿಯಾಲ ಬೈಲು ಮೂಲಕ ಬಸ್ ಸಂಚಾರ ಆರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಪಿ ಸಿ ಜಯರಾಮ, ಬ್ಲಾಕ್ ಕಾಂಗ್ರೆಸ್ ಸಮಿತಿ ಸುಳ್ಯ ಇದರ ಪ್ರಧಾನ ಕಾರ್ಯದರ್ಶಿ ಪಿ ಎಸ್ ಗಂಗಾಧರ, ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನಗಳ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಸುಳ್ಯ ತಾಲೂಕು ಪಂಚಾಯತ್ ಇದರ ಕೆಡಿಪಿ ಸದಸ್ಯರಾದ ಧರ್ಮಪಾಲ ಕೊಯಂಗಾಜೆ, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನಗಳ ಸಮಿತಿ ಸದಸ್ಯರಾದ ಸೋಮಶೇಖರ ಕೇವಳ ಉಪಸ್ಥಿತರಿದ್ದರು.










