ಕೊಡಗು ಸಂಪಾಜೆ ಸ. ಹಿ ಪ್ರಾ ಶಾಲೆಯ ಎಸ್. ಡಿ. ಎಂ. ಸಿ ಅಧ್ಯಕ್ಷರಾಗಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ ಕಾರ್ಯ ನಿರ್ವಹಿಸಿ ಅಧ್ಯಕ್ಷ ಸ್ಥಾನದಿಂದ ನಿವೃತ್ತಿ ಹೊಂದಿದ ಶ್ರೀಧರ ಪಡ್ಪು ಅವರಿಗೆ ಶಾಲಾ ಅಧ್ಯಾಪಕ ವೃಂದದಿಂದ ಜುಲೈ 9 ರಂದು ಸನ್ಮಾನಿಸಲಾಯಿತು.









ಶ್ರೀಧರ ಪಡ್ಪು ಅವರು ಮೂಲತಃ ಕೊಡಗು ಸಂಪಾಜೆ ಗ್ರಾಮದ ಪಡ್ಪು ಮನೆತನವರಾಗಿದ್ದಾರೆ. ಇವರು 2016 ರಿಂದ 2025 ರವರೆಗೆ ಸುಮಾರು ಒಂಬತ್ತು ಬಾರಿ ಕೊಡಗು ಸಂಪಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್. ಡಿ.ಎಂ.ಸಿ ಅಧ್ಯಕ್ಷರಾಗಿ ಶಾಲೆಯ ಅಭಿವೃದ್ಧಿಯತ್ತ ಸಹಕಾರಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಜುಲೈ 5 ರಂದು ನೂತನ ಎಸ್. ಡಿ.ಎಂ.ಸಿ ರಚನೆಯಾಗಿದ್ದು, ಅವರು ಅಧ್ಯಕ್ಷ ಹುದ್ದೆಯಿಂದ ಯಿಂದ ನಿವೃತ್ತಿಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಶಾಲಾ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಗದೀಶ್ ಪರಮಲೆ , ಉಪಾಧ್ಯಕ್ಷರಾಗಿ ಆಯ್ಕೆ ಆದ ಪರಮೇಶ್ವರ ಕೂವೆಕಾಡು , ಪ್ರಭಾರ ಮುಖ್ಯೋಪಾಧ್ಯಾಯರು ಕವಿತಾ ಕುಮಾರಿ , ಸಹ ಶಿಕ್ಷಕ ಚೇತನ್ ಬಿ.ಆರ್ , ಗಾಯತ್ರಿ , ಶಾಹಿರ, ಮೌನ, ನಜ್ಮಾ ಸಹ ಶಿಕ್ಷಕರು ಉಪಸ್ಥಿತರಿದ್ದರು.










