ಪಂಜ:ಮೋನಪ್ಪ ಗೌಡ ಬೊಳ್ಳಾಜೆ, ಕೆಳಗಿನ ಮನೆಯವರಿಗೆ ಶ್ರದ್ಧಾಂಜಲಿ

0

ಐವತ್ತೊಕ್ಲು ಗ್ರಾಮದ ಮೋನಪ್ಪ ಗೌಡ ಬೊಳ್ಳಾಜೆ,ಕೆಳಗಿನ ಮನೆ ಇತ್ತೀಚೆಗೆ ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಸಭೆ ವೈಕುಂಠ ಸಮಾರಾಧನೆ ಕಾರ್ಯಕ್ರಮ ಜು.10 ರಂದು ಪಡ್ಪಿನಂಗಡಿ ನಡ್ಕ ಶಿವ ಗೌರಿ ಕಲಾಮಂದಿರದಲ್ಲಿ ನಡೆಯಿತು.
ಹಿರಿಯ ಸಹಕಾರಿ ಧುರೀಣ ಮಾಧವ ಗೌಡ ಜಾಕೆ, ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ನುಡಿನಮನ ಸಲ್ಲಿಸಿದರು.

ಮೃತರ ಪತ್ನಿ ಶ್ರೀಮತಿ ಬಾಲಕಿ, ಪುತ್ರರಾದ ಲಕ್ಷ್ಮಣ ಗೌಡ, ಗಂಗಾಧರ, ರುಕ್ಮಯ್ಯ , ಸುಬ್ರಾಯ , ಪುತ್ರಿಯರಾದ
ಶ್ರೀಮತಿ ಕಮಲ ವೀರಪ್ಪಗೌಡ ಕಟ್ಟ,
ಶ್ರೀಮತಿ ಅರುಣ ಕುಮಾರಿ ಲೋಕೇಶ್ ತಾಳಿತ್ತಡಿ ,ಸೊಸೆಯಂದಿರಾದ ಶ್ರೀಮತಿ ವೇದಾವತಿ ,ಶ್ರೀಮತಿ ಸುಧಾ,ಶ್ರೀಮತಿ ಪ್ರಮೀಳಾ,ಶ್ರೀಮತಿ ಶಮ್ಯ, ಮೊಮ್ಮಕ್ಕಳಾದ ಡಾ.ಅಕ್ಷತಾ ಬಿ ಎಲ್, ಅಕ್ಷಿತ್ ಕುಮಾರ್ ಬಿ.ಎಲ್, ಮೋಕ್ಷ ಬಿ.ಜಿ., ಪ್ರತೀಕ್ಷಾ ಬಿ.ಜಿ., ಕುಶಿತ್ ಕುಮಾರ್ ಬಿ.ಆರ್.,ಹನ್ಸಿಕಾ ಬಿ. ಆರ್., ಬಾನ್ವಿ ಬಿ. ಎಸ್., ಗಾನವ್ ಬಿ. ಎಸ್.,ಲಿಖಿತ ಕೆ. ತುಷಾರ್ ಕೆ, ಭೂಮಿಕಾ ಟಿ.ಎಲ್., ನಿಹಾಲ್‌ ಟಿ.ಎಲ್.
ಬಂಗಾಡಿ ಕೌಡಂಗೆ ಕುಟುಂಬಸ್ಥರು, ಅಳಿಯಂದಿರು ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದು ಮೃತರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಸೋಮಶೇಖರ ನೇರಳ ನಿರೂಪಿಸಿದರು.